ಪ್ರವಾದಿ ಮೊಹಮ್ಮದರ ಪ್ರತಿಕ ಈದ್ ಭಾರತ ಸರ್ವಧರ್ಮಗಳ ಗೂಡು. ಸಮನ್ವತೆಯ ಬಿಡು…!!!

ಪ್ರವಾದಿ ಮೊಹಮ್ಮದರ ಪ್ರತಿಕ ಈದ್
ಭಾರತ ಸರ್ವಧರ್ಮಗಳ ಗೂಡು. ಸಮನ್ವತೆಯ ಬಿಡು.ಹಬ್ಬ ಹರಿದಿನಗಳಿಗೆ ವಿಶೇಷತೆಯ ಮೆರಗು ನೀಡಿದ ಧಾರ್ಮಿಕತೆಯ ತವರು. ಒಬ್ಬರೋಬ್ಬರು ಬೇರೆಯುತ ಒಂದಾಗಿ ಬಾಳುವ ಸರ್ವ ಜನಾಂಗದ ಶಾಂತಿಯ ತೋಟ.ಪ್ರತಿ ಧರ್ಮಗಳು ಹಬ್ಬವನ್ನು ಅತ್ಯಂತ ಸಂತೋಷದಿಂದ ಪರಸ್ಪರ ಭಾಗಿಯಾಗುತ ತನೆಲ್ಲ ದುಗುಡಗಳನ್ನ ಮರೆಯುತ ಚಿಂತೆ,ನೋವುಗಳ ಸರಿಸುತ ಸಂಭ್ರಮಿಸುವವರು .ಇಂತಹ ಹಬ್ಬಗಳಲ್ಲಿ ಮುಸ್ಲಿಂ ಧರ್ಮದವರು ಆಚರಿಸುವ ಪ್ರಮುಖ ಹಬ್ಬವೇ ಈದ್ ಮಿಲಾದ್ ಯಾವುದೇ ಹಬ್ಬವನ್ನು ಆಚರಿಸಲು ಅದಕ್ಕೆ ಅದರದ್ದೇ ಆದ ಹಿನ್ನಲೆ ಇದ್ದೆ ಇರುತ್ತದೆ.ಹಾಗಾಗಿ ಈ ಹಬ್ಬಕ್ಕೂ ಮರೆಯಲಾಗದ ವ್ಯಕ್ತಿಯ ಆದರ್ಶ ಬದುಕಿ ಬಾಳಿದ ನೀತಿಯ ಸೂತ್ರಗಳು ಬೋಧನೆಗಳು ಪ್ರೇರಕವಾಗಿದೆ.ಅಂತಹ ಮಹಾನ್ ವ್ಯಕ್ತಿ ಬೇರೆ ಯಾರು ಅಲ್ಲ . ನುಡಿದಂತೆ ನಡೆದ ಮೌಲ್ಯಗಳ ಚೇತನ . ಆದರ್ಶಗಳ ಮೂಲಕ ಹೆಸರಾದವರು ಇಸ್ಲಾಂ ಧರ್ಮದ ಸಂಸ್ಥಾಪಕರು ಕುರಾನನ್ ಪೋಷಕರು ಮಾನವೀಯತೆಯ ಹರಿಕಾರರು, ಶಾಂತಿ ದೂತರು, ಧರ್ಮನಿಷ್ಠರು ಭಾವೈಕ್ಯತೆಯ ಪರಿಪಾಲಕರಾಗಿರುವ ಪ್ರವಾದಿ ಮೊಹಮ್ಮದ್ ಪೈಗಂಬರರ ಜನ್ಮದಿನವನ್ನು ಈದ್ ಮಿಲಾದ್ ಹಬ್ಬವೆಂದು ಆಚರಿಸುವರು (ಮಿಲಾದ್ ಉನ್ ನಬಿ) ಈ ಹಬ್ಬ ನಾಡಿನಲ್ಲಿ ಸ್ನೇಹ ಸೌಹಾರ್ದತೆಗೆ ಸ್ಪೂರ್ತಿಯಾಗಲಿ ಮಹಮ್ಮದ್ ಪೈಗಂಬರರ ಬೋಧನೆಗಳು ಬದುಕಿಗೆ ದಾರಿದೀಪವಾಗಲಿ
ಆಸೀಫ್ ದೊಡ್ಮನೆ,ಜಿಲ್ಲಾಧ್ಯಕ್ಷರು
ಅಹಿಂದ ಕರ್ನಾಟಕ ಸಾಮಾಜಿಕ ಜಾಲತಾಣ ಬಳ್ಳಾರಿ ಜಿಲ್ಲಾ ತ್ಯಾಗದಾಳ್…

ವರದಿ, ಕಾಶೆಪ್ಪ ಸಂಡೂರು ಗ್ರಾಮಾಂತರ

Leave a Reply

Your email address will not be published. Required fields are marked *