ಕೋಲಾಟ ಸ್ಪರ್ಧೆ ಬಾಲಕಿಯರ ವಿಭಾಗ ರಾಜ್ಯಮಟ್ಟಕ್ಕೆ ಆಯ್ಕೆ…
ಸಂಡೂರು ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಮ್ ತುಂಬರಗುದ್ದಿ ಕೋಲಾಟ ಸ್ಪರ್ಧೆಯಲ್ಲಿ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಮ್ ತುಂಬರಗುದ್ದಿ ಶಾಲೆಯ ಮಕ್ಕಳು ಜಿಲ್ಲಾಮಟ್ಟದಲ್ಲಿ ಗುಂಪು ಆಟವಾದ ಕೋಲಾಟ ಸ್ಪರ್ಧೆಯಲ್ಲಿ ಜಯಭೇರಿ ವಂದಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂನ ಸ್ವರ್ಣ ಜಯಂತಿ ಹಾಗೂ ಭಾರತೀಯ ಸಂಸ್ಕೃತಿ ಉತ್ಸವ 07 ನೇ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಹೆಜ್ಜೆ ಇಟ್ಟಿದ್ದಾರೆ ಈ ಮಕ್ಕಳಿಗೆ ವಿಶೇಷವಾಗಿ ತರಬೇತಿ ನೀಡಿದ ಇಬ್ಬರು ಶಿಕ್ಷಕರು ಎಚ್ ನಾಗಪ್ಪ ಎಂ ಹುಲಿ ರಾಜ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು ಆಂಜನೇಯ ಉಪಾಧ್ಯಕ್ಷರು ಓಬಳೇಶ ಮತ್ತು ಸರ್ವ ಸದಸ್ಯರ ಸಹಕಾರದಿಂದ ವಲಯಮಟ್ಟ ತಾಲೂಕು ಮಟ್ಟ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ರಾಜ್ಯದಲ್ಲಿ ಭಾಗವಹಿಸಲು ಸೆಡ್ಡು ಹೊಡೆದಿದ್ದಾರೆ ಗ್ರಾಮದ ಜನತೆಗೆ ಶಾಲೆಯ ಕ್ರೀಡೆ ಮನೋಭಾವ ಹೊಂದಿದ ಮಕ್ಕಳಿಗೆ ಸ್ಪೂರ್ತಿಯಾಗಿದ್ದ್ದಾರೆ ಶಾಲೆ ಶಿಕ್ಷಕರು S DMCಊರಿನ ಗ್ರಾಮಸ್ಥರು ಶುಭಕೋರಿ ಸಂತೋಷ ವ್ಯಕ್ತಪಡಿಸಿದ್ದಾರೆ…
ವರದಿ.. ಕಾಶಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030