ಎಂ.ಟೆಕ್ ನಲ್ಲಿ first rank ಪಡೆದ ನಾಗರಾಜ್.ಕೆ.ಇವರಿಗೆ ಅಭಿನಂದನೆ ಸಲ್ಲಿಸಿದ ಶ್ರೀ ಈ.ತುಕಾರಾಮ್ ಸಂಸದರು…
ಸಂಡೂರು ತಾಲೂಕಿನ ಸೋವೇನಹಳ್ಳಿ ಗ್ರಾಮದ ಕೆ.ನಾಗರಾಜ್ ರವರು ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ವಿದ್ಯಾಲಯ ಸಂಡೂರ್ ನಲ್ಲಿ ಎಂ.ಟೆಕ್ (ಮಿನರಲ್ ಮತ್ತು ಪ್ರೊಸೆಸಿಂಗ್) ವಿಷಯದಲ್ಲಿ ಪ್ರಸಕ್ತ ಸಾಲಿನಲ್ಲಿ first rank ಪಡೆದಿರುತ್ತಾರೆ.
ಇಂದು (14-09-2024) ಸಂಸದರ ಜನಸಂಪರ್ಕ ಕಛೇರಿ ಸಂಡೂರಿನಲ್ಲಿ ಶ್ರೀ ಈ ತುಕಾರಾಮ್ ಸಂಸದರು ಪ್ರತಿಭಾ ವಂತ ವಿದ್ಯಾರ್ಥಿ ಕೆ.ನಾಗರಾಜ್ ಅವರನ್ನು ಅಭಿನಂದಿಸಿ ” ನೀನು ಉನ್ನತ ಸ್ಥಾನಕ್ಕೆ ಹೋಗುವುದರೊಂದಿಗೆ ಈ ನಿನ್ನ ಪ್ರಯತ್ನ ಇತರರಿಗೆ ಮಾದರಿಯಾಗಲಿ” ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಪಿ.ಜಯರಾಮಪ್ಪ ಹಾಗೂ ಸೋವೇನಹಳ್ಳಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು…
ವರದಿ. ಕಾಶೆಪ್ಪ, ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030