ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೊಣಸಿಗೆರೆ ಗ್ರಾಮದಿಂದ ಬೆಟ್ಟದ ತುದಿಯಲ್ಲಿರುವ ಕಮತೂರು(ದೇವಗಿರಿ) ಗ್ರಾಮಕ್ಕೆ ತೆರಳುವ ಈ ರಸ್ತೆ ನನ್ನ ಅಂದಾಜಿನ ಪ್ರಕಾರ ಸುಮಾರು 15 ಕೀ ಮೀ ಇರಬಹುದು.ಅದರಲ್ಲಿ ಅರ್ಧದಷ್ಟು ರಸ್ತೆ ಮಳೆಗೆ ಕೊಚ್ಚಿ ಹೋಗಿ ರಸ್ತೆಯ ಮದ್ಯ,ಅಲ್ಲಲ್ಲಿ ರಸ್ತೆಯ ಅಂಚಿನಲ್ಲೂ ಹಾಳಾಗಿರುವುದರಿಂದ ಬೆಟ್ಟ ಹತ್ತುವ ಮತ್ತು ಇಳಿಯುವ ಸಂದರ್ಭದಲ್ಲಿ ಘಾಟ್ ಸೆಕ್ಷನ್ ಇರುವುದರಿಂದ ಬೈಕ್ ಸವಾರರು ಮೈಯಲ್ಲ ಕಣ್ಣಾಗಿ ಬೈಕ್ ಚಲಾಯಿಸಬೇಕು.ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಆಗುವ ಸಂಭವ ಇರುತ್ತದೆ.ಕಮತೂರು ಅಮ್ಮನ ತವರುಮನೆ ಆಗಿರುವುದರಿಂದ ಈ ರಸ್ತೆಯನ್ನ ನಾನು ಬಾಲ್ಯದಿಂದ ನೋಡುತ್ತಾ ಬೆಳೆದವನು.ಒಂದು ವಿಶೇಷತೆ ಹೇಳೋದಾದ್ರೆ ಈ ಬೆಟ್ಟದಲ್ಲಿನ ಹಸಿರು ಹೊನ್ನಿನ ಸೌಂದರ್ಯ ನಿಜಕ್ಕೂ ಸ್ವರ್ಗ.ದೇಶ ವಿದೇಶದಲ್ಲಿ ಹೆಸರಾದರೂ ಈ ಮಾರ್ಗಕ್ಕೆ ಒಂದು ಉತ್ತಮವಾದ ರಸ್ತೆ ಮಾಡಿಸುವಲ್ಲಿ ವಿಫಲವಾಗಿರುವುದು ನಿಜಕ್ಕೂ ವಿಷಾದದ ಸಂಗತಿ.ಏನೇ ಆದರೂ ಈ ವ್ಯಾಪ್ತಿಗೆ ಸಂಭಂದಿಸಿದ ಜನಪ್ರತಿನಿದಿನಗಳು, ಅಧಿಕಾರಗಳು,ಕಂಪನಿಗಳು ನಿಗಾ ವಹಿಸಿ ಈ ಮಾರ್ಗಕ್ಕೆ ಒಂದು ಉತ್ತಮವಾದ ರಸ್ತೆ ಮಾಡಿಸಲು ಕ್ರಮಕೈಗೊಳ್ಳಲಿ ಆದಷ್ಟು ತುರ್ತಾಗಿ ಈ ಮಾರ್ಗಕ್ಕೆ ರಸ್ತೆ ಕರುಣಿಸಲಿ,ಜನರು ಸುಖಕರ ಪ್ರಯಾಣ ಮಾಡಲಿ.
ವರದಿ. ಕಾಶೆಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030