ಸರ್ಕಾರಿ ಪದವಿ ಪೂರ್ವ ಕಾಲೇಜು ನೂತನ ಕಟ್ಟಡ ಉದ್ಘಾಟನಾ ಸಮಾರಂಭ… ಸಂಡೂರು ತಾಲೂಕಿನ ಚೋರನೂರು ಹೋಬಳಿಯಲ್ಲಿ ಸರ್ಕಾರಿ ನೂತನ ಕಟ್ಟಡವನ್ನು ಉದ್ಘಾಟನಾ ಸಮಾರಂಭವನ್ನು ಶ್ರೀ ಮಾನ್ಯ ಸಂಸದರು ಈ ತುಕಾರಾಂ ನೆರವೇರಿಸಿದರು ಸಂಡೂರು ತಾಲೂಕಿನಲ್ಲಿ ಶಿಕ್ಷಣಕ್ಕೆ ಅತಿ ಹೆಚ್ಚು ಮಹತ್ವವನ್ನು ನೀಡಿ ಶಿಕ್ಷಣ ಪ್ರೇಮಿ ಎಂದು ಹೆಸರುವಾಸಿಯಾಗಿರುವ ಸಂಸದರು ಸಂಡೂರು ತಾಲೂಕಿನಲ್ಲಿ ಮೂಲೆ ಮೂಲೆಯಲ್ಲಿರುವ ಸರ್ಕಾರಿ ಕಟ್ಟಡಗಳನ್ನು ಪರಿಶೀಲಿಸಿ ಸಂಡೂರು ತಾಲೂಕಿನ ಪ್ರತಿಯೊಂದು ಸರ್ಕಾರಿ ಶಾಲಾ ಕಾಲೇಜುಗಳನ್ನು ಭೇಟಿ ಮಾಡಿ ಅಲ್ಲಿನ ಕೊಠಡಿಗಳ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಕಟ್ಟಡಗಳನ್ನು ಮಂಜೂರು ಮಾಡಿ ಅವಳನ್ನ ಅತಿ ಶೀಘ್ರದಲ್ಲಿ ಪೂರ್ಣ ಕೊಳ್ಳುವಂತೆ ಶ್ರಮಿಸಿ ಶಿಕ್ಷಣದ ಚಾಪು ಮೂಡಿಸಲು ಮಕ್ಕಳ ಮುಂದಿನ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಮಕ್ಕಳ ಮುಂದಿನ ಭವಿಷ್ಯವನ್ನು ಮನಗಂಡು ಈ ದಿನ ಚೋರ್ನೂರು ಹೋಬಳಿ ಮಟ್ಟದಲ್ಲಿ ನೂತನ ಕಟ್ಟಡವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರು ಶರಣಬಸಯ್ಯ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಪರಮೇಶ್ವರಪ್ಪ ಹಾಗೂ ಸದಸ್ಯರಾದ ಬಟ್ಟೆ ಅಂಗಡಿ ಶಿವಣ್ಣ, ವೆಂಕಟೇಶ್, ಶ್ರೀನಿವಾಸ, ಶ್ರೀಮತಿ, ರೂಪ, ಹನುಮಂತಪ್ಪ, ಟಿಪಿ ಮೆಂಬರ್ ಆದ ಶ್ರೀ ಸುಲೇಮಾನ್, ಉಪಸ್ಥಿತರಿದ್ದರು.. ಜೊತೆಗೆ ಉಪನ್ಯಾಸಕರಾದ ಡಾ. ಎಂ ರಾಜಣ್ಣ, ವಿ ನಾಗರಾಜ, ಕೆ ದುರ್ಗ ಪ್ರಸಾದ್, ಒಳಗೊಂಡಂತೆ ಅತಿಥಿ ಉಪನ್ಯಾಸಕರಾದ, ಪ್ರಕಾಶ್ ಬಿ, ಓಬಳೇಶ್, ಸುಗಂಧಿನಿ ಭಾಗವಹಿಸಿದ್ದರು ಪ್ರಮುಖವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರು ಅಂಜಿನಮ್ಮ ಹಾಗೂ ಉಪಾಧ್ಯಕ್ಷರು ಸರ್ವ ಸದಸ್ಯರು ಹಾಜರಿದ್ದರು…
ವರದಿ. ಕಾಶೆಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030