ಹಳೆ ವಿದ್ಯಾರ್ಥಿಗಳಿಂದ ಶಿಕ್ಷಕರ ದಿನಾಚರಣೆ ಆಚರಣೆ… ಶ್ರೀ ಸಾಯಿಬಾಬಾ ಕಿರಿಯ ಪ್ರಾಥಮಿಕ ಶಾಲೆ ಗೊಲ್ಲ ಲಿಂಗಮನಹಳ್ಳಿ 136 ನೇ ಡಾ: ಸರ್ವಪಲ್ಲಿ ರಾಧಾಕೃಷ್ಣನ್ ರವರ ದಿನಾಚರಣೆಯನ್ನು ವಿಶೇಷವಾಗಿ ಆಚರಣೆ ಮಾಡಲಾಯಿತು ತಾಲೂಕಿನ ಗೊಲ್ಲ ಲಿಂಗಮ್ಮನಹಳ್ಳಿ ವ್ಯಾಪ್ತಿಯಲ್ಲಿ ಪ್ರೀತಿ ವಿಶ್ವಾಸ ಮಮತೆ ಶಿಕ್ಷಕರ ಪಾಠಕ್ಕೆಮನ ಸೋತು ಪ್ರಸಿದ್ಧವಾದ ಶಿಕ್ಷಕರು ನೀಡುವ ತರಬೇತಿಗಳಿಗೆ ಹೆಸರುವಾಸಿಯಾಗಿರುವ ಶ್ರೀ ಸಾಯಿಬಾಬಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 136ನೇ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ದಿನಾಚರಣೆಯ ಅಂಗವಾಗಿ ಶಾಲೆಯ ಹಳೆಯ ನೆನಪುಗಳು ಮರುಕಳಿಸುವೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳಿಂದ ಶಿಕ್ಷಕರ ದಿನಾಚರಣೆ ಆಚರಣೆ ಮಾಡಿ ಶಿಕ್ಷಕರಿಗೆ ಮರೆಯಲಾಗದ ವಿದ್ಯಾರ್ಥಿಗಳು ಎನಿಸಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ನವೋದಯ ತರಬೇತಿ ಕಾರ್ಯಗಾರದಲ್ಲಿ ಮಾದರಿ ಪ್ರಶ್ನೆ ಪತ್ರಿಕೆಯಲ್ಲಿ ಮೊದಲ ರಾಂಕ್ ಪಡೆದ ಹೆಚ್ಆರ್ ತನುಶ್ರೀ ಸಾಯಿತೇಜ ಅಖಿಲೇಶ್. ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು ಹಾಗೂ 2015 16ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಅನಿಸಿಕೆಗಳನ್ನು ಹೇಳುವ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎನ್ ಕುಮಾರಸ್ವಾಮಿ ಕಾರ್ಯದರ್ಶಿಗಳಾದ ಮರಿಸ್ವಾಮಿ ಹಾಗೂ ಮುಖ್ಯ ಶಿಕ್ಷಕರಾದ ಚಿತ್ತಪ್ಪ ಸರ್ ಶ್ರೀ ಸಾಯಿ ಬಾಬಾ ಕಿರಿಯ ಪ್ರಾಥಮಿಕ ಶಾಲೆಯ ರೂವಾರಿ ಎಂದೇ ಪ್ರಸಿದ್ಧ ಪಡೆದ ಹುಲಗಪ್ಪ ಏಕೆ ಹಾಗೂ ಸಹ ಶಿಕ್ಷಕರು ಭಾಗವಹಿಸಿದ್ದರು. ಹಳೆಯ ವಿದ್ಯಾರ್ಥಿಗಳ ಅನಿಸಿಕೆಗಳನ್ನು ಕೇಳುತ್ತಾ ಪ್ರೀತಿಯ ಕಣ್ಣೀರನ್ನು ಸುರಿಸಿ ಸಂತೋಷವನ್ನು ಹಂಚಿಕೊಂಡರು ನಮ್ಮ ಪ್ರೀತಿಯ ವಿದ್ಯಾರ್ಥಿಗಳು ಯಾರನ್ನೇ ಮರೆತರೂ ಪ್ರಾಥಮಿಕ ಶಾಲೆ ಶಿಕ್ಷಕರನ್ನ ಮರೆಯುವುದಿಲ್ಲ ಎಂದು ತಮ್ಮ ಹೃದಯಗಳಲ್ಲಿ ಪಿಸುಗುಡಿಸಿದವು…
ವರದಿ. ಕಾಶಪ್ಪ, ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030