ಭವಿಷ್ಯದ ಪೀಳಿಗೆಗೆ ಪರಿಸರವನ್ನು ಉಳಿಸುವ ಜವಾಬ್ದಾರಿ ಈಗಿನ ವಿದ್ಯಾರ್ಥಿಗಳ ಮೇಲಿದೆ- ಮೂಲೆಮನೆ ಈರಣ್ಣ…!!!

Listen to this article

ಭವಿಷ್ಯದ ಪೀಳಿಗೆಗೆ ಪರಿಸರವನ್ನು ಉಳಿಸುವ ಜವಾಬ್ದಾರಿ ಈಗಿನ ವಿದ್ಯಾರ್ಥಿಗಳ ಮೇಲಿದೆ- ಮೂಲೆಮನೆ ಈರಣ್ಣ…
ಇಂದು ರೀಚ್ ಸಂಸ್ಥೆ ಸಂಡೂರು ಹಾಗೂ ಚೋರನೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಕಾಲೇಜಿನ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಭಾರತದಲ್ಲಿ ಮಹಿಳಾ ಶಿಕ್ಷಣದ ರೂವಾರಿ ಸಾವಿತ್ರಿ ಬಾಯಿ ಫುಲೆ ಅವರ 194ನೇ ಜನ್ಮದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ, ಇಂದಿನ ಪರಿಸರ ಮಾಲಿನ್ಯಕ್ಕೆ ಮಾನವ ನಡೆಸುವ ಅಭಿವೃದ್ಧಿ ಹೆಸರಿನ ದೌರ್ಜನ್ಯದಿಂದ ಪರಿಸರ ಮಾಲಿನ್ಯದ ಪ್ರಮಾಣ ಹೆಚ್ಚಳವಾಗುತ್ತಿದೆ. ನಮ್ಮ ಸುತ್ತಲಿನ ವಾತಾವರಣವು ಕಲುಷಿತಗೊಳ್ಳುತ್ತಿದೆ. ವಾಯು, ಜಲ,ನೆಲ ಪಂಚಭೂತಗಳು ಸಹ ಮಾಲಿನ್ಯಕ್ಕೆ ಒಳಪಾಡುತ್ತಿರುವುದು ಅತ್ಯಂತ ವಿಷಾದದ ಸಂಗತಿಯಾಗಿದೆ. ಉಸಿರಾಡಲು ಶುದ್ಧಗಾಳಿಯ ಖರೀದಿಗಾಗಿ ಜನ ಕ್ಯೂ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗುವ ಹಂತಕ್ಕೆ ಇಂದಿನ ಪರಿಸರವನ್ನು ನಾಶಪಡಿಸಲಾಗಿದೆ. ಸಂಡೂರು ಉತ್ತರ ಕರ್ನಾಟಕ ಆಕ್ಸಿಜನ್ ಬ್ಯಾಂಕ್ ಆಗಿದ್ದು, ಇಂದು ಶುದ್ಧಗಾಳಿಯ ಉತ್ಪಾದನೆ ಪ್ರಮಾಣ ಕಡಿಮೆಯಾಗುತ್ತಾ ಬರುತ್ತಿದೆ. ರೈತರು ನಂಬಿರುವ ಕೃಷಿಗೆ ಮೂಲ ಆಧಾರವಾಗಿರುವುದು ಮಳೆ, ಆದರೆ ಅರಣ್ಯ ನಾಶದಿಂದ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಮರಗಳನ್ನು ಬೆಳೆಸುವುದರಿಂದ ಮಳೆಯನ್ನು ಭೂಮಿಗೆ ಸೆಳೆಯುವಂತೆ ಆಗುತ್ತೆ. ಪ್ರಕೃತಿ ನೀಡಿದ ಅದ್ಭುತವಾದ ಕೊಡುವೆ ವಾಯು ಅದರಿಂದ ಇಂದು ಸಕಲ ಜೀವಿಗಳಿಗೂ ಆಶ್ರಯ ನೀಡುವಂತೆ ಸೃಷ್ಟಿಯಾಗಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ, ಯುವಜನರಲ್ಲಿ ಪರಿಸರದ ಬಗ್ಗೆ ಕಾಳಜಿ ಇಲ್ಲದೆ ಇರುವುದು ಆತಂಕಕ್ಕೆ ಕಾರಣವಾಗಿದೆ. ಪ್ರತಿ ಮನೆಗೊಂದು ಮರ ಪ್ರತಿ ಊರಿಗೊಂದು ವನ ನಿರ್ಮಿಸುವುದರಿಂದ ಶುದ್ಧ ಗಾಳಿಯ ಉತ್ಪಾದನೆ ಮುಂದಾಗುವ ಮೂಲಕ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸುವ ಜವಾಬ್ದಾರಿ ತೆಗೆದುಕೊಳ್ಳುವಂತೆ ಕರೆ ನೀಡಿದರು. ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸಮಾಜಶಾಸ್ತ್ರ ಉಪನ್ಯಾಸಕರಾದ ಡಾ ಎಂ ರಾಜಣ್ಣ ಅವರು ಮಾತನಾಡುತ್ತಾ, ಸಾವಿತ್ರಿ ಬಾಯಿ ಫುಲೆ ಅವರ ತ್ಯಾಗದಿಂದ ಭಾರತದಲ್ಲಿ ಮಹಿಳೆಯರು ಶಿಕ್ಷಣ ಪಡೆಯಲು ಸಾಧ್ಯವಾಯಿತು. ಸಾವಿತ್ರಿ ಬಾಯಿ ಅವರು ಅಂದಿನ ಸಮಾಜದಲ್ಲಿನ ಅನಿಷ್ಟ ಪದ್ಧತಿಯಾದ ಜಾತಿ ದೌರ್ಜನ್ಯ, ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಮಹಿಳೆಯರಿಗೆ ಅಕ್ಷರ ಕಲಿಸುವಂತ ಸಾಹಸಕ್ಕೆ ಕೈಹಾಕಿ ಮಹಿಳೆಯರಿಗಾಗಿ ಶಾಲೆಗಳನ್ನು ಪ್ರಾರಂಭ ಮಾಡಿ ಹೊಸ ಶಿಕ್ಷಣ ಕ್ರಾಂತಿಯನ್ನು ಮಾಡಿದರು, ಅದರ ಫಲವಾಗಿ ಇಂದು ಮಹಿಳೆಯರು ಘನತೆ, ಗೌರವದಿಂದ ಸರಿಸಮಾನವಾಗಿ ಬದುಕುವ ಅವಕಾಶವನ್ನು ಸಂವಿಧಾನ ನೀಡಿದೆ. ಇಂದಿನ ವಿದ್ಯಾರ್ಥಿಗಳು ಸಾವಿತ್ರಿ ಬಾಯಿ ಫುಲೆ ಅವರ ಜೀವನದಿಂದ ಸ್ಪೂರ್ತಿ ಪಡೆದು ಶಿಕ್ಷಿತರಾಗಬೇಕೆಂದು ಹೇಳಿದರು. ರೀಚ್ ಸಂಸ್ಥೆ ಸಂಡೂರು ತಾಲೂಕು ಸಂಯೋಜಕರಾದ ಡಾ ಎರ್ರಿಸ್ವಾಮಿ ಹೆಚ್ ಮಾತನಾಡುತ್ತಾ, ಗ್ರಾಮೀಣ ಭಾಗದಲ್ಲಿ ಪರಿಸರ ಜಾಗೃತಿ ಮೂಡಿಸಲು ಶಾಲೆ, ಕಾಲೇಜುಗಳಲ್ಲಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಕೆಲಸ ಮಾಡಲಾಗುತ್ತಿದೆ. ಸಾವಿತ್ರಿ ಬಾಯಿ ಫುಲೆ ಅವರ ಜನ್ಮದಿನ ಪ್ರಯುಕ್ತವಾಗಿ ಹಮ್ಮಿಕೊಂಡ ಈ ಒಂದು ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣಬಸವಯ್ಯ ಪ್ರಾಂಶುಪಾಲರು, ಹಾಗೂ ಗ್ರಾಮ ಪಂಚಾಯಿತಿ ಗ್ರಂಥಾಲಯದ ಮೇಲ್ವೀರಕಾರದ ನಾಗರಾಜ್, ಕಾಲೇಜಿನ ಉಪನ್ಯಾಸಕರಾದ ನಾಗರಾಜ್, ಓಬಳೇಶ್, ಪ್ರಕಾಶ್, ಸುಗಂಧಿನಿ, ಸೇತುಮಾಧವ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುದ್ದಿ ಇವರಿಂದ ಡಾ ಎರ್ರಿಸ್ವಾಮಿ ಹೆಚ್ ರೀಚ್ ಸಂಸ್ಥೆ ಸಂಡೂರು ತಾಲೂಕು ಸಂಯೋಜಕರು…

ವರದಿ. ಕಾಶೇಪ್ಪ ಸಂಡೂರು ಗ್ರಾಮಾಂತರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend