ಸಂಡೂರು…ಪ್ರಿಯಾಂಕ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ…..
ತಾಲೂಕಿನ ವಿಜೇತದಲ್ಲಿ ಮಾನವ ಸೇರ್ಪಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು ” ಸುಯಿಸೈಡ್ ಮತ್ತು ಸುಪಾರಿ ಭಾಗ್ಯ” ನೀಡಿದ ಕಾಂಗ್ರೆಸ್ ಸರ್ಕಾರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಸಂಡೂರಿನಲ್ಲಿ ಮಾನವ ಸರಪಳಿ ನಿರ್ಮಿಸುವುದರ ಮೂಲಕ ವಿಶೇಷ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದಾರೆ. ಈ ಪ್ರತಿಭಟನೆಯ ಸರ್ಪಳಿಯಲ್ಲಿ ಬಿಜೆಪಿ ಮಂಡಲದ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಹಿರಿಯ ಮುಖಂಡರು, ಹಾಗೂ ಜಿಲ್ಲಾ ದಿಂದ ಬಂದಂತಹ ಇತರೆ ನಾಯಕರು, ಮಾತನಾಡಿ ಗ್ಯಾಂಗ್ಸ್ಟರ್ ಸಚಿವರಾದ ಪ್ರಿಯಾಂಕ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಮಾಡಿದ್ದೇವೆ ಮತ್ತು ಇದು ಅತ್ಯಂತ ಘೋರವಾದ ದುರಂತವಾಗಿದೆ ಇದರ ವಿರುದ್ಧ ನಾವು ಪ್ರತಿ ಮನೆಗೊಬ್ಬರು ಎದ್ದು ನಿಂತು ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಕೊಲೆಗಡುಕ ಕಾಂಗ್ರೆಸ್ ಸರ್ಕಾರ ಮತ್ತು ಗುತ್ತಿಗೆದಾರ ಸಚಿನ್ ಪಾಂಚಳ್ ಆತ್ಮಹತ್ಯೆಗೆ ಕಾರಣರಾದ ಪ್ರಿಯಾಂಕ ಖರ್ಗೆ ವಿರುದ್ಧ ರಾಜೀನಾಮೆಗೆ ಆಗ್ರಿಸುತ್ತೇವೆ. ಅವರು ಕೂಡಲೇ ರಾಜೀನಾಮೆ ಕೊಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ. ದೊಡ್ಡ ಹೋರಾಟ ನಡೆಯುತ್ತದೆ ಎಂದು ಗುಡುಗಿದರು…
ವರದಿ.ಕಾಶಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030