ದೇವಗಿರಿ ಪಂಚಾಯತಿಯಲ್ಲಿ ಅಭಿವೃದ್ಧಿ ಅಧಿಕಾರಿಯ ಜಾತಿ,ಭೇದ,ಭಾವ,ದ ಗೋಚರ.” ಮಹನೀಯರ ಫೋಟೋ” ಗೋಡೆಯ ಮೇಲೆ ” ಮಹಾ ನಾಯಕನ” ಫೋಟೋ ಡಸ್ಟ್ ಬಿನ್ ಬಾಕ್ಸ್ ಒಳಗೆ.ಸಂಡೂರು ತಾಲೂಕಿನ ದೇವಗಿರಿ ಗ್ರಾಮ ಪಂಚಾಯತಿಯಲ್ಲಿ ಅವಮಾನಕರ ಘಟನೆ ನಡೆದಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷತನದಿಂದ ಈ ಘಟನೆ ನಡೆದಿದ್ದು ಅಭಿವೃದ್ಧಿ ಅಧಿಕಾರಿಯ ಜಾತಿ ಭೇದ ಭಾವ ನಿಂದನೆ ಪಂಚಾಯತಿಯಲ್ಲಿ ಗೋಚರವಾಗಿದೆ ಎಂದು ಯುವಕರು ಪ್ರತಿಭಟಿಸಿದರು. ಭಾರತ ಸಂವಿಧಾನದ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್. ಕರಡು ಸಮಿತಿಯ ಅಧ್ಯಕ್ಷರು. ಆದ ಇವರು ವಿಶ್ವದ ಅತಿ ಬುದ್ಧಿವಂತ ವ್ಯಕ್ತಿ ಎಂದು ಹೆಸರುವಾಸಿಯಾಗಿದ್ದಾರೆ.
ಅಂತಹ ವ್ಯಕ್ತಿಗೆ ಪಿಡಿಒ ಮತ್ತು ಸಿಬ್ಬಂದಿ ವರ್ಗ ಅನೇಕ ಮಹನೀಯರ ಫೋಟೋಗಳು ಇವೆ ಅವುಗಳೆಲ್ಲವನ್ನು ಗೋಡೆಯ ಮೇಲೆ ಭದ್ರವಾಗಿ ನೇತಾಕಿದ್ದಾರೆ ಆದರೆ, ಮಹರ್ಷಿ ವಾಲ್ಮೀಕಿ ಮತ್ತು ಡಾ. ಬಿಆರ್ ಅಂಬೇಡ್ಕರ್. ಅವರ ಫೋಟೋಗಳನ್ನು ಡಸ್ಟ್ ಬಿನ್ ಬಾಕ್ಸಿಗೆ ಹಾಕಿದ್ದಾರೆ. ಈ ಘಟನೆ ಪಂಚಾಯತಿಗೆ ಒಳಪಡುವ ಹಳ್ಳಿಗಳ ಯುವಕರ ಆಕ್ರೋಶಕ್ಕೆ ಕಾರಣವಾಗಿ ಪಂಚಾಯತಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಯುವಕರು ಮಾತನಾಡಿ ಇಂಥ ನೀಚಾಧಿಕಾರಿಗಳನ್ನು ಕರ್ತವ್ಯದಿಂದ ವಜಗೊಳಿಸುವಂತೆ, ತಮ್ಮ ಜೈ ಭೀಮ್ ಬಳಗದಿಂದ. ಘೋಷಣೆಗಳ ಮುಖಾಂತರ, ಯುವಕರು, ಮುಂಜಾನೆಯಿಂದ ಸಂಜೆಯವರೆಗೆ ಪ್ರತಿಭಟನೆ ನಡೆಸಿದ್ದಾರೆ…
ವರದಿ..ಕಾಶಪ್ಪ ಸಂಡೂರು ಗ್ರಾಮಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030