ಕೆಟ್ಟು ನಿಂತ ಶುದ್ಧ ಕುಡಿಯುವಿನ ನೀರಿನ ಘಟಕಕ್ಕೆ ಬೀಗ ಹಾಕಿದ ಗ್ರಾಮಸ್ಥರು
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಹಿರೇಕೆರೆಯೋಗಿನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕಟ್ಟ ಕಟ್ಟಕಡೆಯ ಗಡಿ ಗ್ರಾಮವಾದ ಶ್ರೀರಾಮ ಶೆಟ್ಟಿಹಳ್ಳಿ .ಈ ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕಕ್ಕೆಊರಿನ ಮುಖಂಡರು ಹಾಗೂ ಗ್ರಾಮಸ್ಥರು ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 15 ದಿನಗಳ ನಿಂದ ಕೆಟ್ಟು ನಿಂತ ಘಟಕದಿಂದ ಕುಡಿಯು ನೀರಿನ ಘಟಕ ಸರಿ ಪಡಿಸುತ್ತಾ ಇಲ್ಲ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಇವತ್ತು ಆಗುತ್ತೆ ನಾಳೆ ಆಗುತ್ತೆ ಅಂತ ನಮ್ಮನ್ನು ಮಂಗ ಮಾಡುತ್ತಿದ್ದಾರೆ. ಆದರೆ ಕೆಲಸ ಮಾತ್ರ ಆಗುತ್ತಿಲ್ಲ ಎಂದು ಗ್ರಾಮಸ್ಥರು ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಯಾರೇ ಅಧಿಕಾರಿಗಳು ಬಂದರೂ ಬೀಗ ಮಾತ್ರ ತೆಗೆಯುವುದಿಲ್ಲ ಇದು ಒಂದೇ ಸಮಸ್ಯೆಯಲ್ಲ ಇಂಥ ಅನೇಕ ಸಮಸ್ಯೆಗಳು ಬಾಕಿ ಇದ್ದು ಅಂತ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು ಈ ಸಮಸ್ಯೆಗಳಿಗಳನ್ನು ಶೀಘ್ರದಲ್ಲಿ ಬಗೆಹರಿಸಿ ಕೊಡಬೇಕೆಂದು ಬೀಗ ಹಾಕಿದ್ದೇವೆ ಎನ್ನುತ್ತಿದ್ದಾರೆ ಇಲ್ಲಿನ ಗ್ರಾಮಸ್ಥರುಹಾಗೂ ಗ್ರಾಮದ ಮುಖಂಡರು ಇಂತಹ ಆಡಳಿತದ ವಿರುದ್ಧ ಆಗ್ರಹಿಸಿದರು…
ವರದಿ. ಕಾಶೆಪ್ಪ, ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030