ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಲು ಮುಂದಾದ ಕಟಿಂಗ್ ಶಾಪ್ ಗಣೇಶ ಮತ್ತು ಅವರ ತಂಡ…
ಉಚಿತ ಸ್ವಯಂ ಪ್ರೇರಿತ ರಕ್ತದಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಯಾರಾದರೂ ಸ್ವಯಂ ಪ್ರೇರಿತವಾಗಿ ರಕ್ತವನ್ನು ದಾನ ಮಾಡಬಹುದು. ವಿಮ್ಸ್ ಮದರ್ ಬ್ಲಡ್ ಬ್ಯಾಂಕ್ ಬಳ್ಳಾರಿ ಹಾಗೂ ವಿಮ್ಸ್ ರಕ್ತ ಬಂಡಾರ ಬಳ್ಳಾರಿ ಇವರ ಸಂಯುಕ್ತಾಕ್ಷರದಲ್ಲಿ ಸರ್ಕಾರ ಆಸ್ಪತ್ರೆಯಲ್ಲಿ ಕಾರ್ಯಕ್ರಮ ಜರಗಿತ್ತು. ಈ ಉಚಿತ ಸ್ವಯಂ ರಕ್ತದಾನ ಶಿಬಿರದಲ್ಲಿ ಸಂಡೂರಿನ ಕಟಿಂಗ್ ಶಾಪ್ ಗಣೇಶ ಮತ್ತು ಇವರ ತಂಡ ” ಒಂದು ಜೀವವನ್ನು ಉಳಿಸಲು ರಕ್ತ ಎಷ್ಟು ಮುಖ್ಯವೋ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ರಕ್ತ ಸಿಗುವುದು ಅಷ್ಟೇ ಮುಖ್ಯ, ಎಂದು ತೀರ್ಮಾನ ಮಾಡಿದ ಕಟಿಂಗ್ ಶಾಪ್ ಗಣೇಶ ಅವರ ಕೆಳಗೆ ಕೆಲಸ ಮಾಡುವ ಅವರ ತಂಡ ಸೇರಿ ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಲು ನೆರವಾಗಿದ್ದಾರೆ ಮತ್ತೆ ಒಟ್ಟಿಗೆ ರಕ್ತದಾನ ಮಾಡುವ ಇನ್ನೊಬ್ಬರಿಗೆ ಆದರ್ಶ ವ್ಯಕ್ತಿಗಳಾಗಿದ್ದಾರೆ. ಅಲ್ಲಿನ ಡಾಕ್ಟರ್ ಗಳು ನೀವು ಮಾಡುವ ಚಿಕ್ಕ ಕೆಲಸವಾದರೂ ಈ ದಿನ ಮಾಡಿರುವ ರಕ್ತದಾನ ಒಂದು ಜೀವವನ್ನು ಉಳಿಸುವಂಥದ್ದು ಇದು ಇವತ್ತು ಕೆಲಸವಾಗಿದೆ ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯರು ಪ್ರಶಂಸೆ ವ್ಯಕ್ತಪಡಿಸಿದರು. ಕಟಿಂಗ್ ಗಣೇಶ ಅವರು ಮಾತನಾಡಿ. ನಮ್ಮಿಂದ ಒಂದು ಜೀವ ಉಳಿಯುತ್ತದೆ ಎಂದರೆ ಅದಕ್ಕಿನ ದೊಡ್ಡ ಸಂತೋಷ ನಮಗೆ ಯಾವುದೇ ಇದೆ ಎಂದು ಖುಷಿಯಿಂದ ರಕ್ತದಾನ ಮಾಡಿ ಹೊರಬಂದರು.
ವರದಿ.ಕಾಶಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030