ಶ್ರೀ ಮುರಳೀಧರ ಪ್ರೌಢ ಶಾಲೆಯಿಂದ ಟ್ಯೂಷನ್ ಕ್ಲಾಸಿನ ಸಮಾರೋಪ ಸಮಾರಂಭ ಕಾರ್ಯಕ್ರಮ
ಹೊಸದುರ್ಗ: ತಾಲೂಕಿನ ಹಾಲುರಾಮೇಶ್ವರ ಯೋಜನಾ ಕಛೇರಿ ವ್ಯಾಪ್ತಿಯ ಮಾಡದಕೆರೆ ವಲಯದ ಶ್ರೀ ಮುರಳೀಧರ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಕಳೆದ ಮೂರು ತಿಂಗಳಿಂದ ಟ್ಯೂಷನ್ ಕ್ಲಾಸ್ ನಡೆಸುತ್ತಿದ್ದು ಮಕ್ಕಳಿಗೆ ಹೆಚ್ಚಿನ ಜ್ಞಾನವನ್ನು ರೂಪಿಸಲು ಹಾಗೂ ಉತ್ತಮ ಫಲಿತಾಂಶವನ್ನು ಹೆಚ್ಚಿಸಲು ಯೋಜನೆಯಿಂದ ಮಕ್ಕಳಿಗೆ ಟ್ಯೂಷನ್ ಕ್ಲಾಸನ್ನು ನಡೆಸಲಾಗುತ್ತಿತ್ತು.ಇಂದು ಟ್ಯೂಷನ್ ಕ್ಲಾಸಿನ ಸಮಾರೋಪ ಸಮಾರಂಭ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಈರಣ್ಣ ಅವರು ವಹಿಸಿದ್ದರು.
ತಾಲೂಕಿನ ಯೋಜನಾಧಿಕಾರಿಯವರಾದ ಚಂದ್ರಶೇಖರ್, ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳು ಕಲಿಕೆಗೆ ಹೆಚ್ಚು ಆಸಕ್ತಿಯನ್ನು ವಹಿಸಿದರೆ ಭವಿಷ್ಯದ ದಿನಗಳನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಆದಕಾರಣ ಏಕಾಗ್ರತೆಯಿಂದ ಓದಿದರೆ ಜಯ ಖಂಡಿತ ಸಿಗುತ್ತದೆ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಮುಖ್ಯೋಪಾಧ್ಯಾಯರದ ಜಯರಾಮ್, ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ದಂಪತಿಗಳು ಸಮಾಜಮುಖಿ ಕೆಲಸವನ್ನು ನಡೆಸುತ್ತಿದ್ದು. ಸರ್ವರಿಗೂ ಪ್ರಯೋಜನಕಾರಿಯಾಗಿದೆ ನಮ್ಮ ಶಾಲೆಗೆ ಟ್ಯೂಷನ್ ಕ್ಲಾಸ್ ಕಾರ್ಯಕ್ರಮವನ್ನು ಆಯೋಜಿಸಿದ್ದು ತುಂಬಾ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹೇಳಿದರು
ಕಾರ್ಯಕ್ರಮದಲ್ಲಿ ಶಾಲೆ ಶಿಕ್ಷಕರಾದ ಶ್ರೀಮತಿ ಚೇತನ, ಹರೀಶ್, ಪ್ರಹ್ಲಾದ್, ಅತಿಥಿ ಶಿಕ್ಷಕರಾದ ಮಮತಾ, ಜ್ಞಾನ ವಿಕಾಸ, ಸಮನ್ವಯಧಿಕಾರಿ ಗಂಗಮ್ಮ, ಸೇವಾ ಪ್ರತಿನಿಧಿ ದೀಪ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030