ಶಿವಮೊಗ್ಗ ಆದಿ ಕರ್ನಾಟಕ ಗರಡಿ ಮನೆ ಒತ್ತುವರಿ ವಿರೋಧಿಸಿ ಧರಣಿ
ಶಿವಮೊಗ್ಗ ನಗರದ ಒ.ಟಿ.ರಸ್ತೆ ಹಳೆ ಮಂಡಳಿ ಎ.ಕೆ. ಕಾಲೋನಿಯಲ್ಲಿರುವ ಆದಿ ಕರ್ನಾಟಕ ಗರಡಿ ಮನೆ ಒತ್ತೂರಿ ವಿರೋಧಿಸಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ನಡೆಸಲಾಯಿತು. ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಪಾದಯಾತ್ರೆ ನಡೆಸಿ, ಡಿ.ಸಿ. ಕಛೇರಿ ಮುಂಬಾಗದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು. ನ್ಯಾಯ ಸಿಗುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಎ.ಕೆ. ಕಾಲೋನಿ ನಿವಾಸಿಯಾದ ಶ್ರೀ ಸುಭಾಷ್ ರವರು ಮತ್ತು ನಿವಾಸಿಗಳು ತಿಳಿಸಿದರು. ಮಾತಂಗಮ್ಮ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಈ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು…
ವರದಿ. ಸೋಮಶೇಖರ್ ಶಿವಮೊಗ್ಗ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030