ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ ರ ವತಿಯಿಂದ ಮಾರುತಿ ನಗರ ಭದ್ರಾವತಿಯಲ್ಲಿ ಸಹ್ಯಾದ್ರಿ ಕೆಂಪು ಮುಕ್ತಿ ಮತ್ತು ಗಂಧಸಾಲೆ ನಂದ ಶಾಲೆ ತಳಿಗಳ ಪೋಷಕಾಂಶ ನಿರ್ವಹಣೆಯ ಬಗ್ಗೆ ದಿನಾಂಕ11. 11.2024ರಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕ್ಷೇತ್ರೋತ್ಸವವನ್ನು ಕೆಳದಿ ಶಿವಪ್ಪ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾಕ್ಟರ್ ಆರ್ ಸಿ ಜಗದೀಶ್ ಅವರು ಈ ಕ್ಷೇತ್ರೋತ್ಸವವನ್ನು ಉದ್ಘಾಟಿಸಿದರು ಕುಲಪತಿಗಳು ತಮ್ಮ ಉದ್ಘಾಟನಾ ಭಾಷಣದಲ್ಲಿ ಪದ್ಧತಿ ಪ್ರತ್ಯಕ್ಷಗಳನ್ನು ರೈತರ ಠಾಕುಗಳಲ್ಲಿ ತೆಗೆದುಕೊಂಡು ರೈತರಿಗೆ ಬೀಜೋಪಚಾರ ಸಮಗ್ರ ಪೋಷಕಾಂಶಗಳ ನಿರ್ವಹಣೆ, ರೋಗ ಮತ್ತು ಕೀಟಗಳಿಗೆ ಸಮಗ್ರ ನಿರ್ವಹಣೆ ನಿರ್ವಹಣೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ರೈತರಿಗೆ ತಿಳಿಸಿಕೊಡಲಾಗುತ್ತದೆ ಹಾಗೆಯೇ ಈ ಸಹ್ಯಾದ್ರಿ ಕೆಂಪು ಮುಕ್ತಿಯು ಬಣ್ಣದಲ್ಲಿ ಕೆಂಪಾಗಿದ್ದು ಹೆಚ್ಚು ಪೋಷಕಾಂಶಗಳನ್ನು ಹೊಂದಿದ್ದು ರುಚಿ ಮತ್ತು ಸಿಹಿಯಾಗಿರುತ್ತದೆ ಇದೇ ರೀತಿ ಗಂಡಸಾಲ ಭತ್ತದ ತಳಿಯು ಹೆಚ್ಚು ಪರಿಮಳವನ್ನು ಹೊಂದಿದ್ದು ಜೀರಿಗೆ ಹಾಗೆ ಇರುತ್ತದೆ. ಸಹ್ಯಾದ್ರಿ ಕೆಂಪು ಮುಕ್ತಿಯು ಕೆಂಪು ಮುಕ್ತಿಯ ತಳಿಯನ್ನು ನಮ್ಮ ವಿಶ್ವ ನಮ್ಮ ವಿಶ್ವವಿದ್ಯಾಲಯದಿಂದ ಬಿಡುಗಡೆಗೊಂಡಿರುತ್ತದೆ.
ಈ ಕ್ಷೇತ್ರೋತ್ಸವದಲ್ಲಿಸಹ ಸಂಶೋಧನ ನಿರ್ದೇಶಕರಾದ ಡಾಕ್ಟರ್ ಪ್ರದೀಪ್ ಹಾಗೂ ಸಹ ವಿಸ್ತಾರಣ ನಿರ್ದೇಶಕರಾದ ಬಿಸಿ ಹನುಮಂತ್ ಸ್ವಾಮಿ ಅವರು ಮತ್ತು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಸಿ ಸುನಿಲ್ ಅವರು ಮತ್ತು ಕೃಷಿ ವಿಜ್ಞಾನ ಕೇಂದ್ರದ ಎಲ್ಲಾ ವಿಜ್ಞಾನಿಗಳು ಭಾಗವಹಿಸಿದ್ದರು. ಈ ಕ್ಷೇತ್ರೋತ್ಸವದಲ್ಲಿ ಸುಮಾರು 75 ರೈತರು ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡರು…
ವರದಿ, ಸೋಮಶೇಖರ್ ಶಿವಮೊಗ್ಗ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030