ಮುರಾರ್ಜಿ ವಸತಿ ಶಾಲೆಯಲ್ಲಿ ಶ್ರೀಸಂತ ಸೇವಾಲಾಲ್ ರವರ 282ನೇ ಜಯಂತಿ ಆಚರಣೆ….

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ15.2.2021. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಿದ್ದಾಪುರ ಗ್ರಾಮ*

ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿರುವ( ಗುಡೆಕೋಟೆ) ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶ್ರೀ ಸಂತ ಸೇವಾಲಾಲ್ ರವರ 282ನೇ ಜಯಂತಿಯನ್ನು ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಭಾಷಾ ಶಿಕ್ಷಕರಾದ ಕೆ ಪ್ರಕಾಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಹಾಗೂ ಡಿಎಸ್ಎಸ್ ತಾಲೂಕು ಸಂಘಟನಾ ಸಂಚಾಲಕರಾದ ಸಿದ್ದಾಪುರದ ಡಿಎಂ ಈಶ್ವರಪ್ಪ ಇವರು ವಹಿಸಿದ್ದರು. ಇಂಗ್ಲಿಷ್ ಭಾಷಾ ಶಿಕ್ಷಕರಾದ ಟಿಎನ್ ನವೀನ್ ರವರು ಸ್ವಾಗತಿಸಿದರು. ವರದಿಗಾರ ಈಶ್ವರಪ್ಪನವರ ಮಾತನಾಡಿ ಬಂಜಾರ ಸಮುದಾಯದ ಸಂತ ಶ್ರೀ ಸೇವಾಲಾಲ್ ರವರು ತಮ್ಮ ಸಮುದಾಯದ ಮತ್ತು ಇತರ ಸಮುದಾಯದ ಏಳಿಗೆಗಾಗಿ ಶ್ರಮಿಸಿದ ಅವರಲ್ಲೊಬ್ಬರು ದೇಶದಲ್ಲಿ ಅನೇಕ ಶರಣರು ಸಂತರು ಇದ್ದಾರೆ ಪವಾಡ ಪುರುಷರು ಇದ್ದಾರೆ ಅವರಲ್ಲಿ ಸಂತ ಸೇವಾಲಾಲ್ ಅವರು ಸಹ ಲೋಕಕಲ್ಯಾಣಕ್ಕಾಗಿ ಸಮಾಜದ ಏಳಿಗೆಗಾಗಿ ಮೌಢ್ಯತೆ ಕಂದಾಚಾರಗಳನ್ನು ತೊಡೆದು ಹಾಕಲು ಹಾಗೂ ಸಮುದಾಯದ ರಕ್ಷಣೆಗೆ ನಿಂತವರು ಎಂದು ಮಾತನಾಡಿದರು. ನಂತರ ಬಿ ಓ ಮಾರಯ್ಯ ಸಮಾಜ ವಿಜ್ಞಾನ ಶಿಕ್ಷಕರು ಸಂತ ಸೇವಾಲಾಲ್ ರವರ ಕುರಿತು ಅವರು ನಡೆದು ಬಂದ ದಾರಿ ಸಮುದಾಯಗಳ ಬಗ್ಗೆ ಅವರು ಮಾಡಿದ ಸೇವೆ ಮನೋಭಾವನೆಗಳ ಬಗ್ಗೆ ಮಾತನಾಡಿದರು ಕೊನೆಯದಾಗಿ ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ ಕೆ ಪ್ರಕಾಶ್ ರವರು ಶಾಲಾ ಮಕ್ಕಳಿಗೆ ಶ್ರೀ ಸಂತ ಸೇವಾಲಾಲ್ ಗುರುಗಳ ಆದರ್ಶಗಳನ್ನು ಅಳವಡಿಸಿಕೊಳ್ಳಿ. ಉತ್ತಮ ಶಿಕ್ಷಣ ಪಡೆದು ಉನ್ನತ ಪದವಿ ತೆಗೆದುಕೊಂಡು ಸಮಾಜದಲ್ಲಿನ ಹಾಗೂ ಸಮುದಾಯಗಳಲ್ಲಿನ ಮೌಢ್ಯತೆ ಕಂದಾಚಾರಗಳನ್ನು ಹೋಗಲಾಡಿಸಲು ಮುಂದಾಗಿ ದೇಶದಲ್ಲಿ ಸಮಾಜದಲ್ಲಿ ಒಳ್ಳೆಯ ಅದರ್ಶ ವ್ಯಕ್ತಿಗಳಾಗಿ ಬಾಳಿ ಎಂದು ಮಾತನಾಡಿದರು ಈ ಒಂದು ಸಮಾರಂಭದಲ್ಲಿ ವಸತಿ ಶಾಲೆಯ ಸಿಬ್ಬಂದಿಗಳಾದ ಎಚ್ ಅನಿತಾ ಕಾರ್ತಿಕ್ ಕಾವ್ಯ ಕರಿಬಸಮ್ಮ ಮತ್ತು ಡಿ ದರ್ಜೆಯ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿನಿಲಯದ ಸಿಬ್ಬಂದಿ ವಸತಿ ಶಾಲೆಯ ಎಲ್ಲಾ ಶಿಕ್ಷಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *