ವಿಜಯನಗರ ಜಿಲ್ಲಾಮಟ್ಟದಲ್ಲಿ ಮಾಕನಡಕು ಬಾಲಕರ ಕಬಡ್ಡಿಗೆ ದ್ವಿತೀಯ ಸ್ಥಾನ…
ತಾಲೂಕಿನ ಗುಡಕೋಟೆ ಹೋಬಳಿ ಚಿಕ್ಕ ಜೋಗಿಹಳ್ಳಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಮಾಕನಡಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ಕಬಡ್ಡಿ ವಿಭಾಗದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ ಶಾಲಾ ಮಕ್ಕಳನ್ನು ಅಭಿನಂದಿಸಿ ಶಾಲೆಯ ಮುಖ್ಯ ಶಿಕ್ಷಕಿ ಉಷಾರಾಣಿ ಮಾತನಾಡಿ ಮಕ್ಕಳಿಗೆ ಪಾಠದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ ಪ್ರತಿಭೆಗಳನ್ನು ಗುರುತಿಸಬೇಕು ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಕೂಡ ಉತ್ತಮವಾಗಿ ಆಟ ಆಡಿ ಈ ನಮ್ಮ ಶಾಲೆಗೆ ಒಳ್ಳೆಯ ಹೆಸರು ತಂದಿದ್ದಾರೆ ಎಂದು ಶುಭ ಹಾರೈಸಿದರು ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಉಷಾರಾಣಿ ಮತ್ತು ಎಸ್ .ಡಿ. ಎಂ. ಸಿ. ಅಧ್ಯಕ್ಷರಾದ ಮುತ್ತಪ್ಪ, ಭಾಗ್ಯಲಕ್ಷ್ಮಿ ಶುಭ ಮಂಗಳ ಪ್ರಶಾಂತ್ ಕೃಷ್ಣಮೂರ್ತಿ, ಸೋಮಶೇಖರ್, ಶಾಲೆಯ ಸರ್ವ ಸದಸ್ಯರು ಶಾಲೆಯ ಶಿಕ್ಷಕರು ಗ್ರಾಮಸ್ಥರು ಅಭಿನಂದಿಸಿದರು…
ವರದಿ:- ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030