ಕರ್ನಾಟಕ ಕ್ಷತ್ರಿಯ ಒಕ್ಕೂಟದಿಂದ ಸೋಮವಂಶ ಸಹಸ್ರಾರ್ಜುನ ಮಹಾರಾಜರ ಜಯಂತಿ ಆಚರಣೆ…!!!

Listen to this article

ಕರ್ನಾಟಕ ಕ್ಷತ್ರಿಯ ಒಕ್ಕೂಟದಿಂದ ಸೋಮವಂಶ ಸಹಸ್ರಾರ್ಜುನ
ಮಹಾರಾಜರ ಜಯಂತಿ ಆಚರಣೆ

ಲಿಂಗಸೂಗೂರು: ಕರ್ನಾಟಕ ಕ್ಷತ್ರಿಯ ಒಕ್ಕೂಟದ ತಾಲೂಕ ಘಟಕದಿಂದ ಪಟ್ಟಣದ ತುಳಜಾಭವಾನಿ ಮಂದಿರದಲ್ಲಿ ಕ್ಷತ್ರಿಯ ಕುಲದ ಮಹಾಪುರುಷ ಸೋಮವಂಶ ಸಹಸ್ರಾರ್ಜುನ ಮಹಾರಾಜರ ಜಯಂತಿ ಆಚರಣೆ ಮಾಡಲಾಯಿತು.

ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಒಕ್ಕೂಟದ ತಾಲೂಕ ಅಧ್ಯಕ್ಷ ಸತ್ಯನಾರಾಯಣಸಿಂಗ್, ಜಯಂತಿ ಆಚರಣೆ ಮೂಲಕ ಕ್ಷತ್ರಿಯ ಕುಲದ ಮಹಾಪುರುಷರ ಜೀವನ, ಸಾಧನೆ ಮತ್ತು ಮನುಕುಲಕ್ಕೆ ಅವರು ನೀಡಿದ ಸಂದೇಶಗಳು ಯುವಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕು, ಪರಸ್ಪರ ಪ್ರೀತಿ, ವಿಶ್ವಾಸಗಳಿಂದ ಎಲ್ಲರೂ ಬೆರೆತು ಕಾರ್ಯಕ್ರಮಗಳು ಮಾಡಿದಾಗ ಸಂಘಟನೆ ಬೆಳವಣಿಗೆ ಜೊತೆಗೆ ಬಾಂಧವ್ಯ ವೃದ್ಧಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶೋಭಾ ಕಾಟವಾ, ಉಪಾಧ್ಯಕ್ಷ ಚಂದಪ್ಪ ಕಟ್ಟಿಮನಿ, ವಾಸು ಸುಗಂಧಿ, ಪ್ರಧಾನ ಕಾರ್ಯದರ್ಶಿ ದುರ್ಗಾಸಿಂಗ್, ರವಿಕುಮಾರ ಸೂರ್ಯವಂಶಿ ಖಜಾಂಚಿ ರವಿಕುಮಾರ ಸುಗಂಧಿ, ಅಂಬಾಸ್ ಖೋಡೆ, ಹಿರಿಯರಾದ ಮೋಹನ್ ಕಲಾಲ್, ಪರಶುರಾಮಸಾ ದಲಬಂಜನ್ ಸೇರಿದಂತೆ ಹಲವರು ಭಾಗವಹಿಸಿದ್ದರು…

ವರದಿ. ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend