ಮಾದಕ ವ್ಯಸನಗಳಿಂದ ದೂರವಿರಿ: ದತ್ತಾತ್ರೇಯ ಕಾರ್ನಾಡ್
ಲಿಂಗಸೂಗೂರು: ಮಾದಕ ವ್ಯಸನಗಳಿಂದ ದೂರವಿದ್ದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ್ ಹೇಳಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೋಲಿಸ್ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧದ ಅಂತರಾಷ್ಟ್ರೀಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಯುವ ಸಮೂಹ ದೇಶದ ಆಸ್ತಿ, ಸಚ್ಚಾರಿತ್ರ್ಯವಂತರಾಗಿ ಬಾಳಬೇಕು ಎಂದು ಸಲಹೆ ನೀಡಿದರು.
ಸಿಪಿಐ ಪುಂಡಲೀಕ್ ಪಟತ್ತರ್, ಪ್ರಾಚಾರ್ಯ ಮುರುಗೇಂದ್ರಪ್ಪ ಗೊರೆಬಾಳ ಮಾತನಾಡಿದರು.
ಎಎಸ್ಐ ಹನುಮಂತಪ್ಪ, ರಾ.ಸೇ.ಯೋ ಅಧಿಕಾರಿ ಸೋಮಶೇಖರ ಬಳಗಾನೂರ, ಉಪನ್ಯಾಸಕ ಶಿವಶರಣಯ್ಯ ಸೊಪ್ಪಿಮಠ ಸೇರಿದಂತೆ ಎಲ್ಲಾ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು…
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030