ಬಸವಣ್ಣ ಅವರಂತೆ ಹೋಳೆಗೆ ಹಾರಿ ಎಂದು ಭಾಷಣ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ವಿನೋದ್ ಗೌಡ ಚಾಗಲ್ ಇವರು ಖಂಡಿಸಿದ್ದಾರೆ. ಯತ್ನಾಳ್ ಅವರಿಗೆ ಬಸವ ಧರ್ಮದ ಪರಿಚಯವೇ ಇದ್ದಂತಿಲ್ಲ. ಇನ್ನಾದರೂ ಬಸವಣ್ಣನವರ ಇತಿಹಾಸವನ್ನು ಓದುವ ಪ್ರಯತ್ನ ಮಾಡಲಿ ಬಸವಣ್ಣ ಅವರ ಬಗ್ಗೆ ಲಿಂಗಾಯತರ ಬಗ್ಗೆ ಅವರು ಹಾಡಿರುವ ಮಾತುಗಳನ್ನು ನಾವು ಖಂಡಿಸುತ್ತೇವೆ. ಯತ್ನಾಳಗೇ ತಾವೇನು ಮಾತಾಡುತ್ತೇವೆ ಎನ್ನುವ ಪ್ರಜ್ಞೆ ಇದ್ದಂತಿಲ್ಲ,ದೊಡ್ಡವರನ್ನು ಹೀಯಾಳಿಸಿ ಮಾತಾಡಿದರೆ ಹಾಗೂ ಬೈದರೆ ಯತ್ನಾಳ ಅವರು ದೊಡ್ಡವರಾಗುತ್ತೇವೆ. ಎನ್ನುವ ಭ್ರಮಲೋಕದಲ್ಲಿ ಅವರು ಇರುವಂತಿದೆ ಇನ್ನಾದರೂ ಆಡುವ ಮಾತಿನ ಬಗ್ಗೆ ಗಮನವಿರಲಿ ಎಂದು ಶ್ರೀ ವಿನೋದ್ ಗೌಡ ಚಾಗಲ್ ಅವರು ಯತ್ನಾಳ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ…
ವರದಿ. ನಾಗರಾಜ್, ವಿ, ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030