ರಾಯಚೂರು
ಕಾರು ಮತ್ತು ಬೈಕ್ ಮಧ್ಯ ಡಿಕ್ಕಿ ಸಂಭವಿಸಿದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ರಾಯಚೂರು ತಾಲೂಕಿನ ಗುಂಜಳ್ಳಿ ಗ್ರಾಮದಲ್ಲಿ ನಡೆದಿದೆ ಹಾಗೂ ದ್ವಿಚಕ್ರ ವಾಹನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ವಿನೋದ್ 22 ಮೃತಪಟ್ಟ ಯುವಕ ದ್ವಿಚಕ್ರ ವಾಹನ ಚಾಲಕನಾಗಿರುವ ತಿಪ್ಪಯ್ಯ 29 ಎಂಬುವರ ಕಾಲು ಮುರಿದಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಮೃತಪಟ್ಟ ವಿನೋದ ಆಗು ತ್ತಿಪ್ಪಯ್ಯ ಸಂಬಂಧಿಕರು ಎಂದು ಹೇಳಲಾಗಿದ್ದು ಗುಂಜಳ್ಳಿ ಗ್ರಾಮ ಪಂಚಾಯತ್ ಹತ್ತಿರ ಕಾರು ವೇಗವಾಗಿ ಬಂಧು ಬೈಕಿಗೆ ಡಿಕ್ಕಿ ಹೊಡೆದಿರೋ ಪರಿಣಾಮ ಈ ಅಪಘಾತ ಸಂಭವಿಸಿದೆ.
ಘಟನಾ ಸ್ಥಳದಿಂದ ಕಾರು ಚಾಲಕ ಪರಾರಿಯಾಗಿದ್ದು ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲೆಯನ್ನು ನಡೆಸುತ್ತಿದ್ದಾರೆ…
ವರದಿ, ನಾಗರಾಜ್, ವಿ, ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030