ಮಸ್ಕಿ ನಗರದಾದ್ಯಂತ ರಸ್ತೆಯ ಅಕ್ಕಪಕ್ಕದಲ್ಲಿ ಗಿಡಮರಗಳನ್ನು ನೆಟ್ಟು ಬೆಳಸಲು ಕ್ರಮಕೈಗೊಳ್ಳಲು ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ಅಮರೇಗೌಡ ಮಲ್ಲಾಪೂರ ಮನವಿ
ರಾಯಚೂರು ಜಿಲ್ಲೆಯ ಮಸ್ಕಿ ನಗರದ ಪ್ರಮುಖ ರಸ್ತೆಗಳು ನೆರಳಿಲ್ಲದೆ ಸುಡು ಬಿಸಿಲಿನಿಂದ ಬಿಕೋ ಎನ್ನುತ್ತಿವೆ ಇದರಿಂದ ಸಾರ್ವಜನಿಕರಿಗೆ ಬಿಸಿಲಿನ ತಾಪ ತಡೆಯಲಾರದೆ ಅಂಗಡಿ ಮುಗ್ಗಟುಗಳ ಮುಂದೆ ಗುಂಪು ಗುಂಪಾಗಿ ಬಸ್ಸಿಗಾಗಿ ಕಾದು ಸುಸ್ತಾಗುತ್ತಿದ್ದಾರೆ.ನಗರದ ಪ್ರಮುಖ ರಸ್ತೆಗಳಲ್ಲಿ ಗಿಡಮರಗಳನ್ನು ನೆಟ್ಟು ಪೋಷಣೆ ಮಾಡಿದರೆ ಸಾರ್ವಜನಿಕರು ನೆರಳನ್ನು ಪಡೆಯಬಹುದು ಮತ್ತು ಶುದ್ಧವಾದ ಗಾಳಿಯನ್ನು ಪಡೆಯಬಹುದು ಹಾಗೂ ಮಸ್ಕಿ ನಗರವನ್ನು ಹಚ್ಚಹಸಿರಿನಿಂದ ಕಂಗೊಳಿಸುವಂತೆ ಮಾಡಬಹುದು ಅರಣ್ಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಸ್ಕಿ ನಗರದ ಪ್ರಮುಖ ರಸ್ತೆಗಳ ಅಕ್ಕಪಕ್ಕದಲ್ಲಿ ಗಿಡಗಳನ್ನು ನೆಟ್ಟು ಬೆಳಸಲು ಕ್ರಮ ಕೈಗೊಳ್ಳಬೇಕು ಎಂದು ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಮನವಿ ಮಾಡಿದರು…
ವರದಿ. ಲಿಂಗರಾಜ್, ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030