ಸಂಸದರಾದ ಜಿ,ಕುಮಾರ್ ನಾಯಕ್ ಅವರಿಂದ ಸುದ್ದಿಗೋಷ್ಠಿ…
ರಾಯಚೂರು,
ರಾಯಚೂರು ವಿಮಾನ ನಿಲ್ದಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಇಂದು ರಾಯಚೂರು ಸಂಸದರಾದ ಜಿ ಕುಮಾರ್ ನಾಯಕ್ ಅವರು ಮಾಧ್ಯಮದವರನ್ನು ಉದ್ದೇಶಿಸೀ ಮಾತನಾಡಿದರು.
ರಾಯಚೂರಿನಲ್ಲಿ ವಿಮಾನ ನಿಲ್ದಾಣ ಆಗಬೇಕೆಂದು ಇಲ್ಲಿನ ಜನರ ಬಹುದೊಡ್ಡ ಕನಸು ಆಗಿತ್ತು ಆ ಕನಸು ಕೊನೆಗೂ ಈಗ ನನಸಾಗುತ್ತಿದೆ.
ಹಲವಾರು ತೊಡಕುಗಳಿದ್ದ ಕಾರಣ ಯೋಜನೆಯ ವಿಳಂಬವಾಗಿತ್ತು ಆದರೆ ಈಗ ಸೈಟ್ ಕ್ಲಿಯರಿಂಗ್ಸ್ ದೊರಕಿರುವುದು ಸಂತಸದ ಸಂಗತಿ.
ಈ ಮುನ್ನ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಶ್ರೀ ರಾಮ್ ಮೋಹನ್ ನಾಯ್ಡು ಅವರನ್ನು ಮೂರು ಬಾರಿ ಭೇಟಿ ಮಾಡಿ, ಯೋಜನೆಯ ಮಹತ್ವವನ್ನು ಮನವರಿಕೆ ಮಾಡಿದ್ದೆ ಅದರ ಪರಿಣಾಮವಾಗಿ ಸೈಟ್ ಕ್ಲಿಯರೆನ್ಸ್ ದಾಖಲೆಗಳನ್ನು ನೀಡಲಾಗಿದೆ ಎಂದು ಈ ಸಂದರ್ಭದಲ್ಲಿ ರಾಯಚೂರು ಸಂಸದರಾದ ಜಿ ಕುಮಾರ್ ನಾಯಕ್ ರವರು ಮಾಧ್ಯಮಗಳೀಗೆ ತಿಳಿಸಿದರು…
ವರದಿ. ನಾಗರಾಜ್, ವಿ, ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030