ನ.1 ರಿಂದ ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ಕಡ್ಡಾಯ ಜಿಲ್ಲಾ ಪೊಲೀಸ್ ಪ್ರಕಟಣೆ…
ರಾಯಚೂರು,
ರಾಯಚೂರು ನಗರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಟ್ರಾಫಿಕ್ ಪಿಎಸ್ಐ ವೆಂಕಟೇಶ್ ರವರ ನೇತೃತ್ವದಲ್ಲಿ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ನವಂಬರ್ 1 ರಿಂದ ದ್ವಿಚಕ್ರ ವಾಹನ ಚಾಲಕರು ಹಾಗೂ ಹಿಂಬದಿ ಸವಾರರು ಹೆಲ್ಮೆಟ ಕಡ್ಡಾಯವಾಗಿ ಧರಿಸಬೇಕು.
ಯಾರಾದರೂ ನಿಯಮವನ್ನು ಉಲ್ಲಂಘನೆ ಮಾಡಿದ್ದು ಕಂಡು ಬಂದಲ್ಲಿ ಅಂತವರ ಮೇಲೆ ದಂಡವನ್ನು ವಿಧಿಸಲಾಗುವುದೆಂದು ನಗರದ ಮುಖ್ಯ ರಸ್ತೆಗಳಲ್ಲಿ ಸಾರ್ವಜನಿಕವಾಗಿ ತಿಳಿಯಪಡಿಸಲಾಯಿತು.
ಆದ ಕಾರಣ ಬೈಕ್ ಸವಾರ ಹಾಗೂ ಹಿಂಬದಿ ಸವಾರರು ದಯವಿಟ್ಟು ಹೆಲ್ಮೆಟ್ ಅನ್ನು ಉಪಯೋಗಿಸಬೇಕು ಈ ಸಂದರ್ಭದಲ್ಲಿ ಹೆಡ್ ಕಾನ್ಸ್ಟೇಬಲ್ಗಳಾದ ತೋಟಪ್ಪ, ಮೋತಿಲಾಲ್, ನಾಗರಾಜ ರವರು ಹಾಜರಿದ್ದರು….
ವರದಿ. ನಾಗರಾಜ್ ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030