KIADBಯ ಅಗತ್ಯ ಮೂಲಭೂತ ಸೌಲಭ್ಯಗಳು ಹಾಗೂ ನಿನ್ನೆ ನಡೆದಂತ ಮರಗಳ ಮಾರಣ ಹೋಮದ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ನೀಡಲಾಯಿತು…
ರಾಯಚೂರು
ಇಲ್ಲಿನ KIADAB ಬಡಾವಣೆಯ ಅಗತ್ಯ ಮೂಲಭೂತ ಸೌಕರ್ಯಗಳ ಬಗ್ಗೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಪತ್ರವನ್ನು ನೀಡಿದ್ದರೂ ಸಹ ಮೂಲಭೂತ ಸೌಕರ್ಯಗಳಾದ ನೀರು, ಬೀದಿ ದೀಪ, ಕಸ ವಿಲೇವಾರಿ ವ್ಯವಸ್ಥೆ ಮಾಡದಕ್ಕಂತಹ ಅಧಿಕಾರಿಗಳ ವಿರುದ್ಧ ಬೇಸತ್ತು ಇಂದು KIADAB ಬಡಾವಣೆಯ
ನಿವಾಸಿಗಳು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೇ ಮನವಿ ಪತ್ರವನ್ನು ನೀಡಿದರು ಹಾಗೂ ನಿನ್ನೆ ನಡೆದಂತ ಮರಗಳ ಮಾರಣ ಹೋಮದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳ ಬಳಿ ಆಗ್ರಹ ಮಾಡಿದರು ಈ ಸಂದರ್ಭದಲ್ಲಿ KIADAB ಬಡಾವಣೆಯ ನಿವಾಸಿಗಳಾದ ವಿಕ್ರಂ ರೆಡ್ಡಿ ಗೌಡ, ಪ್ರಭುಗೌಡ, ವೆಂಕಟೇಶ್ ಇನ್ನು ಮುಂತಾದವರು ಹಾಜರಿದ್ದರು…
ವರದಿ. ನಾಗರಾಜ್, ವಿ, ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030