ರಾಯಚೂರು
ಬೀದರ್ ನಗರದ ನ್ಯೂಟನ್ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಚಂದ್ರಶೇಖರ್ (28) ಬುಧವಾರ ಕರ್ತವ್ಯದಲ್ಲಿ ಇರುವಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಹೃದಯಘಾತವಾದ ತಕ್ಷಣ ಅವರನ್ನು ಬೀಮ್ಸ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಲಾಯಿತು ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರಳೆದರು ಎಂದು ತಿಳಿದು ಬಂದಿದೆ.
ಮೃತ ಕಾನ್ಸ್ಟೇಬಲ್ ಚಂದ್ರಶೇಖರ್ ಅವರು ರಾಯಚೂರು ತಾಲೂಕಿನ ತಲಮಾರಿ ಗ್ರಾಮದವರು.
ಅವರಿಗೆ ಪತ್ನಿ,ಪುತ್ರ ಇದ್ದಾರೆ.
2018ರಲ್ಲೀ ಪೋಲಿಸ್ ಇಲಾಖೆಗೆ ಆಯ್ಕೆಯಾಗಿದ್ದರು ಐದು ವರ್ಷಗಳಿಂದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಆಗಿ ಬೀದರ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು…

ವರದಿ. ನಾಗರಾಜ್, ವಿ, ರಾಯಚೂರು
