ಪರಿಶಿಷ್ಟರ ಅನುದಾನ ಸಮರ್ಪಕ ಬಳಕೆಗೆ ಆಗ್ರಹಿಸಿ ಪ್ರತಿಭಟನೆ. ಗೋಪಾಲ್ ಗಾರಂಪಳ್ಳಿ…!!!

Listen to this article

ಪರಿಶಿಷ್ಟರ ಅನುದಾನ ಸಮರ್ಪಕ ಬಳಕೆಗೆ ಆಗ್ರಹಿಸಿ ಪ್ರತಿಭಟನೆ. ಗೋಪಾಲ್ ಗಾರಂಪಳ್ಳಿ

ಚಿಂಚೋಳಿ. ತಾಲ್ಲೂಕಿನಲ್ಲಿ ಎಸ್‌ಸಿಪಿ- ಟಿಎಸ್‌ಪಿ ವಿಶೇಷ ಘಟಕ ಯೋಜನೆ ಅಡಿಯಲ್ಲಿನ ಅನುದಾನವನ್ನು ಪರಿಶಿಷ್ಟ ಜಾತಿ ಜನರು ವಾಸಿಸುವ ಬಡಾವಣೆಗಳಲ್ಲಿ ಪರಿಣಾಮಕಾರಿಯಾಗಿ ಬಳಕೆ ಸೇರಿಂದ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ತಹಶಿಲ್ದಾರ ಕಾರ್ಯಾಲಯದ ಮುಂದೆ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಯಲ್ಲಿ ಜಗನ್ನಾಥ್ ಡಾಕ್ಟರ್ ರಾಮರಾವ್ ಗಾರಂಪಳ್ಳಿ, ಸತೀಷ್ ದೇಗಲ್ನಡಿ, ವಿಠಲ್ ಟಿಕೆ, ಗೌತಮ್ ಭೋಮ್ನಳ್ಳಿ, ರಾಜಶೇಖ‌ರ್ ಹೊಸಮನಿ, ಪಂಡರಿ ಲೋಡ್ಡನೂರ್. ಗೋಪಾಲ್ ಗಾರಂಪಳ್ಳಿ, ಉಲ್ಲಾಸ್ ಕೆರೊಳ್ಳಿ, ಮಾರುತಿ ಗಂಜಗಿರಿ, ಅಭಿಜಿತ್ ಕುಮಾರ್ ಕೊರವಿ, ಮಹೇಶ್ ಕೆಳಕೇರಿ, ಚೇತನ್ ನಿರಾಳ್ಳ‌ರ್, ಮಹೇಶಕುಮಾರ್ ದೋಟಿಕೋಳ್, ಕಾಶಿರಾಂ ನಾಗಶೇನ್ ಉಮೇಶ್ ದೇಗಲ್ಮಡಿ, ಬಾಬುರಾವ್ ಬೊಮ್ಮನಳ್ಳಿ, ಕಳಸ್ಕರ್, ಅಮೃತರಾವ್ ತಾಜಲಾಪೂರ್, ದೀಲಿಪಕುಮಾರ್ ಬೊಮ್ಮನಳ್ಳಿ, ಪ್ರವೀಣ್ ಮೇತ್ರಿ, ರಾಜು ಚಿಮ್ಮಾಯಿದಲಾಯಿ, ಮೌನೇಶ್ ಮುಸ್ತರಿ, ರವಿಕುಮಾ‌ರ್ ರುಸ್ತಂಪೂರ್, ಮನೋಜ್ ಗಾರಂಪಳ್ಳಿ ಮುಂತಾದವರು ಪಾಲ್ಗೊಂಡಿದ್ದರು.

ಪ್ರತಿಭಟನೆಕಾರರು ನಂತರ ತಹಸಿಲಾ ರ್‌ರಿಗೆ ಮನವಿ ಪತ್ರ ಸಲ್ಲಿಸಿ, ಪ್ರತಿಯೊಂದು ಗ್ರಾಮಗಳಲ್ಲಿರುವ ಕೃಷಿ ರಹಿತ ಪರಿಶಿಷ್ಟ ಜಾತಿಯ ಜನರು ಸಲ್ಲಿಸಿದ ಫಾರ್ಮ್ ನಂಬರ್ 54ನ್ನು ಪರಿಶೀಲನೆ ಮಾಡಿ ಅವರಿಗೆ ಜಮೀನು ವಿತರಣೆ ಮಾಡಬೇಕು ಮತ್ತು ಚಿಮ್ಮನಚೋಡ್ ಗ್ರಾಮದ ಪರಿಶಿಷ್ಟ ಜಾತಿಯ ಬಡಾವಣೆಗೆ ಹೋಗುವ ಮುಖ್ಯ ರಸ್ತೆಯಲ್ಲಿ

ಬರುವ ಲಂಡೇನ ನಾಲದ ಸೇತುವೆಯನ್ನು ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿದರು.

ಸ್ಪಂದಿಸಿದ ತಾಲ್ಲೂಕು ಆಡಳಿತದ ನಿರ್ಲಕ್ಷತನಕ್ಕೆ ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ದಲಿತ ವ್ಯಕ್ತಿ ಮನೆಗೆ ಹೋಗುವಾಗ ನೀರಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಬಾಬು ನೂಲ್ಕರ್ ಅವರ ಕುಟುಂಬಕ್ಕೆ ಪರಿಹಾರ ಮತ್ತು ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಕೊಡುವಂತೆ ಮತ್ತು ದೋಟಿಕೋಳ್, ಕನಕಪೂರ್, ಗಣಾಪೂರ್, ತಾಡಪಳ್ಳಿ, ಪಸ್ತಪೂರ್, ಗಂಜಗಿರಿ ಮುಂತಾದ ಗ್ರಾಮಗಳಲ್ಲಿ ಅರ್ಧಕ್ಕೆ ನಿಂತಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನ ಕಾಮಗಾರಿಗಳು ತ್ವರಿತಗತಿಯಲ್ಲಿ ಮುಗಿಸಬೇಕು ಎಂದು ಅವರು ಆಗ್ರಹಿಸಿದರು.

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಸಿಯಲು ಕಾರಣರಾಗುತ್ತಿರುವುದನ್ನು ಕಂಡು ಹಿಡಿದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ “ಗುಣಮಟ್ಟ ಹೆಚ್ಚಿಸುವಂತೆ ಸೂಚನೆ ನೀಡುವಂತೆ, ತಾಲ್ಲೂಕಿನ ಪ್ರತಿಯೊಂದು ಗ್ರಾಮದ ಪರಿಶಿಷ್ಟ ಜಾತಿಯ ಬಡಾವಣೆಗಳಲ್ಲಿ ನಡೆಯುತ್ತಿರುವ ಅಕ್ರಮ ಮಧ್ಯ ಮಾರಾಟ ತಡೆಯುವಂತೆ ಒತ್ತಾಯಿಸಿದ ಅವರು, ಪುರಸಭೆ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮದ ಪರಿಶಿಷ್ಟ ಜಾತಿಯ ಬಡಾವಣೆಗಳಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಮತ್ತು ಕೆಲವೊಂದು
ಸರ್ಕಾರಿ. ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ವ ಬಲಪಡಿಸುವಂತೆ ಆಗ್ರಹಿಸಿದರು.

ಹಿಂದುಳಿದ ವರ್ಗ. ಅಲ್ಪಸಂಖ್ಯಾತರ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ವತಿಯಿಂದ ನಡೆಯುತ್ತಿರುವ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳ ಪ ಕೊರತೆಯಾಗದಂತೆ ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತಹ ಮಾಸಪತ್ರಿಕೆ ಮತ್ತು ಕನ್ನಡ ಇಂಗ್ಲಿಷ್ ದಿನಪತ್ರಿಕೆಗಳನ್ನು ಸಮಯಕ್ಕೆ ಸರಿಯಾಗಿ ಪೂರೈಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಐನೋಳ್ಳಿ ಮತ್ತು ಹೋಡೆಬೀರನಳ್ಳಿ ಗ್ರಾಮದ ಪರಿಶಿಷ್ಟ ಬಡಾವಣೆಗಳಲ್ಲಿ ಸಾಮೂಹಿಕ ಮಹಿಳಾ ಶೌಚಾಲಯ, ಪ್ರತಿಯೊಂದು ಗ್ರಾಮಗಳಲ್ಲಿ ಜಲಜೀವನ್ ಮಿಶನ್ ಅಡಿಯಲ್ಲಿ – ನಡೆದ ಕಾಮಗಾರಿಗಳಿಂದ ಪರಿಶಿಷ್ಟ ಜಾತಿಯ ಬಡಾವಣೆಗಳಲ್ಲಿ ರಸ್ತೆ ಮದ್ಯ ಅಗಿದಿರುವುದು 5 ಮುಚ್ಚದೆ ಇರುವುದರಿಂದ ಸಾರ್ವಜನಿಕರಿಗೆ – ವಯೋವೃದ್ಧರಿಗೆ ಓಡಾಡಲು ಸಮಸ್ಯೆ ವ ಆಗುತ್ತಿದೆ. ಕೂಡಲೇ ಸಮಸ್ಯೆ ಬಗೆಹರಿಸುವಂತೆ, ಸ್ಥಳೀಯ ಆದರ್ಶ ಶಾಲೆಯ ವಿದ್ಯಾರ್ಥಿಗಳಿಗೆ ಸೆಮಯಕ್ಕೆ ಅನುಗುಣವಾಗಿ ಬಸ್ ಸೌಕರ್ಯ ಕಲ್ಪಿಸುವಂತೆ ಅವರು ಆಗ್ರಹಿಸಿದರು…

ವರದಿ. ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend