ಸಿದ್ದರಾಮಯ್ಯ ರಾಜೀನಾಮೆ ಕೊಡೋ ಪ್ರಶ್ನೆಯೇ ಇಲ್ಲ; ಡಾ.ನಾಗವೇಣಿ
ರಾಯಚೂರು; ಕೋರ್ಟ್ ತೀರ್ಪು ತನಿಖೆಯನ್ನು ನಡೆಸಿ ಎಂದು ಹೇಳಿರುವುದು ಅಷ್ಟೇ ಸಿದ್ದರಾಮಯ್ಯನವರ ಕೇಳಿರೋ ಅರ್ಜಿಯನ್ನು ತಿರಸ್ಕರಿಸಿ ವಿಚಾರಣೆ ನಡೆಸುವಂತೆ ಸ್ಪಷ್ಟಪಡಿಸಿದೆ ತನಿಖೆ ನಡೆಯಲಿ ಆ ತನಿಖೆೆಯಲ್ಲಿ ಸ್ಪಷ್ಟ ನಿರ್ಧಾರಗಳು ಬರುವವರೆಗೂ ವಿರೋಧ ಪಕ್ಷದವರಿಗೆ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷ ಡಾ. ನಾಗವೇಣಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ಕೇಂದ್ರ ಬಿಜೆಪಿಯವರು ಗೌರ್ನರ್ ಹುದ್ದೆಯನ್ನು ಗೌರ್ನರ್ ಆಫೀಸ್‌ನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಹಲವಾರು ಬಿಜೆಪಿಯವರ ತನಿಖೆಗಳನ್ನ ಕೊಟ್ಟರು ಅದನ್ನು ಗೌರ್ನರ್ ಬದಿಗಿಟ್ಟು ಸಿದ್ದರಾಮಯ್ಯನವರ ಪ್ರಕರಣವನ್ನು ತೆಗೆದುಕೊಂಡು ದ್ವೇಷದ ರಾಜಕಾರಣ ಮಾಡಲು ಹೊರಟಿದೆ ಕರ್ನಾಟಕದ ಜನತೆ ೧೩೫ ಸೀಟುಗಳನ್ನು ಕಾಂಗ್ರೆಸ್ಸಿಗೆ ಕೊಟ್ಟು ಸ್ಪಷ್ಟ ಬಹುಮತದ ಆಶೀರ್ವಾದ ನೀಡಿದ್ದಾರೆ ಜನರ ಆಶೀರ್ವಾದ ಇರೋದ್ರಿಂದ ಸಿದ್ದರಾಮಯ್ಯನವರು ರಾಜೀನಾಮೆ ಕೊಡೋ ಪ್ರಶ್ನೆ ಇಲ್ಲ ಎಂದು ಡಾ. ನಾಗವೇಣಿ ಎಸ್ ಪಾಟೀಲ್ ತಿಳಿಸಿದ್ದಾರೆ…
ವರದಿ. ಲಿಂಗರಾಜ್, ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030