ಇಂದು ಗ್ರೀನ್ ರಾಯಚೂರು, ಪರ್ಯಾವರಣ ಸಂರಕ್ಷಣ ಗತಿವಿಧಿ, ನಗರ ಸಭೆ ರಾಯಚೂರು ಸಹಯೋಗದಿಂದ
ನಗರದ ತೋಟದ ಬಾವಿ ಸುತ್ತಮುತ್ತಲಿನ ಆವರಣ ಸ್ವಚ್ಛತೆ ಅಭಿಯಾನ ಹಾಗೂ 412 ನೇ ವಾರದ ನಿರಂತರ ಹಸಿರು ಭಾನುವಾರ ಶ್ರಮದಾನ ನೆರವರಿಸಲಾಯಿತು.
ಜಲಮೂಲಗಳು ಸ್ವಚ್ಛವಿದ್ದರೆ ಜೀವ ಸಂಕುಲ ಸುರಕ್ಷಿತ. ಬನ್ನಿ ಶ್ರೇಷ್ಠ ಕಾರ್ಯಕ್ಕೆ ಕೈ ಜೋಡಿಸೋಣ. ನಮ್ಮ ಸುತ್ತ ಇರುವ ಕೆರೆ ಕಲ್ಯಾಣಿಯಂತಹ ಜಲ ಮೂಲಗಳ ಸ್ವಚ್ಛತೆ ಮಾಡೋಣ, ಪರಿಸರ ರಕ್ಷಿಸೋಣ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ವಾರ್ಡ್ ನಂಬರ್ 17 ಜವಾರ್ ನಗರದ ತೋಟದ ಬಾವಿ ಹಾಗೂ ಸುತ್ತಮುತ್ತಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು ಹಾಗೂ ಪ್ಲಾಸ್ಟಿಕ್ ಬಳಸದಂತೆ ಅದರಿಂದ ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು,
ನಗರ ಸಭೆಯ ಸದಸ್ಯರಾದ ಈ ಶಶಿ ರಾಜ್, ಗ್ರೀನ್ ರಾಯಚೂರು ಪ್ರಮುಖರಾದ ರಾಜೇಂದ್ರ ಶಿವಳ್ಳಿ ಹಾಗೂ ಸದಸ್ಯರು ಮತ್ತು ನಗರಸಭೆ ಅಧಿಕಾರಿಗಳಾದ ಈರಣ್ಣ, ರವಿಕುಮಾರ್, ನಾಗಪ್ಪ ಸಿಬ್ಬಂದಿ ವರ್ಗದವರು ಪೌರ ಕಾರ್ಮಿಕರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು…
ವರದಿ. ನಾಗರಾಜ್, ವಿ, ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030