ರಾಯಚೂರು ಜನರ ಬಹುದಿನದ ಬೇಡಿಕೆ, ನನಸಾದ ದಿನ…!!!

ರಾಯಚೂರು ಜನರ ಬಹುದಿನದ ಬೇಡಿಕೆ, ನನಸಾದ ದಿನ
ರಾಜ್ಯದ 9ನೇ ಮಹಾನಗರ ಪಾಲಿಕೆಯಾಗಿ ರಾಯಚೂರ್ ಘೋಷಣೆ …
ರಾಜ್ಯದ 9ನೇ ಮಹಾನಗರ ಪಾಲಿಕೆಯಾಗಿ ರಾಯಚೂರು ನಗರಸಭೆ ಮೇಲ್ದರ್ಜೆಗೆರಲಿದೆ
ಐತಿಹಾಸಿಕ ಹೈದರಾಬಾದ್ ಕರ್ನಾಟಕ ವಿಮೋಚನ (ಕಲ್ಯಾಣ ಕರ್ನಾಟಕ ಉತ್ಸವ) ದಿನವಾದ ನಾಳೆ ಕಲ್ಬುರ್ಗಿಯಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಯಚೂರು ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆ ಗೊಳ್ಳಲಿದೆ…
೧೯೫೨ ರಲ್ಲಿ ನಗರ ಸಭೆ ಅಸ್ತಿತ್ವ ಪಡೆದ ರಾಯಚೂರು ೧೯೬೧-೬೨ ರಲ್ಲಿ ಗ್ರೇಡ್ ಒನ್ ದರ್ಜೆ ಪಡೆದಿತ್ತು
ನಗರದ ಜನರ ಬಹುದಿನಗಳ ಬೇಡಿಕೆ ಹಾಗೂ ನಿರೀಕ್ಷೆ ರಾಯಚೂರು ಮಹಾನಗರ ಪಾಲಿಕೆ ನಾಳೆ ಸಕಾರ ಗೊಳ್ಳಲಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಾಳೆ ಸಂಜೆ ಕಲ್ಬುರ್ಗಿಯಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಅಧಿಕೃತ ನಿರ್ಣಯದೊಂದಿಗೆ ರಾಯಚೂರು ಮಹಾನಗರ ಪಾಲಿಕೆ ಅಸ್ತಿತ್ವ ಪಡೆಯಲಿದೆ ರಾಜ್ಯದಲ್ಲಿ ಪ್ರಸ್ತುತ ಏಳು ಮಹಾನಗರ ಪಾಲಿಕೆ ಅಸ್ತಿತ್ವದಲ್ಲಿದೆ ನಾಳಿನ ಸಂಪುಟ ಸಭೆಯಲ್ಲಿ ಬೀದರ್ ಹಾಗೂ ರಾಯಚೂರು ಮಹಾನಗರ ಪಾಲಿಕೆಗಳೊಂದಿಗೆ ರಾಜ್ಯದಲ್ಲಿ ಒಂಬತ್ತು ಮಹಾನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬರಲಿವೆ . ರಾಯಚೂರು ಮಹಾನಗರ ಪಾಲಿಕೆ ಮೇಲ್ದರ್ಚಿ ಪ್ರಕ್ರಿಯೆ ಪೂರ್ಣಕ್ಕೆ ರಾಜ್ಯ ಸರ್ಕಾರ ಸರಿ ಸುಮಾರು ೬೦ ಕೋಟಿ ಅನುದಾನ ವೆಚ್ಚ ಮಾಡಲಿದೆ ಈಗಿರುವ ೩೫ ವಾರ್ಡ್ಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೊಳಗೊಂಡು ರಾಯಚೂರ್ ಮಹಾನಗರ ಪಾಲಿಕೆಯಾಗೀ ಅಸ್ತಿತ್ವ ಪಡೆಯಲಿದೆ…

ವರದಿ. ನಾಗರಾಜ್, ವಿ, ರಾಯಚೂರು

Leave a Reply

Your email address will not be published. Required fields are marked *