ಮಾನ್ವಿ ತಾಲೂಕಿನ ಕಪಗಲ್ ಹತ್ತಿರ ಭೀಕರ ರಸ್ತೆ ಅಪಘಾತ…!!!

ರಾಯಚೂರು
ಮಾನ್ವಿ ತಾಲೂಕಿನ ಕಪಗಾಲ್ ಹತ್ತಿರ ಭೀಕರ ಅಪಘಾತ…
ಮಾನ್ವಿ ಕಡೆಯಿಂದ ರಾಯಚೂರಿಗೆ ಹೋಗುತ್ತಿರುವ ಕೆಎಸ್ಆರ್ಟಿಸಿ ಬಸ್ ಹಾಗೂ ಕುರುಡಿ ಕಡೆಯಿಂದ ಬರುತ್ತಿರುವ ಶಾಲಾ ವಾಹನದ ನಡುವೆ ಡಿಕ್ಕಿ…
ಇಂದು ಮುಂಜಾನೆ ಕುರುಡಿಯಿಂದ ಮಾನ್ವಿಯ ಲೋಯಲಾ ಸ್ಕೂಲಿನ ಶಾಲಾ ಮಕ್ಕಳು ಶಾಲೆಗೆ ತೆರಳುತ್ತಿರುವಾಗ ಕಪಗಲ್ ಹತ್ತಿರ ವೇಗವಾಗಿ ಬರುತ್ತಿರುವ ಕೆಎಸ್ಆರ್ಟಿಸಿ ಬಸ್ನ ಡ್ರೈವರ್ನ ಅಜಾಗ್ರತೆ  ಮತ್ತು ಅತಿಯಾದ ವೇಗದ ನಿಯಂತ್ರಣವಾಗದ ಚಾಲನೆಯಿಂದ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಚಿಕ್ಕ ಮಕ್ಕಳು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಇಂದು ಶಿಕ್ಷಕರ ದಿನಾಚರಣೆ ಆಚರಣೆಯ ಸಡಗರದಲ್ಲಿದ್ದ ಪುಟ್ಟ ಮಕ್ಕಳ ಬಾಳಲ್ಲಿ ವಿಧಿಯಾಟವಾಡಿದೆ ಸ್ಥಳದಲ್ಲಿನ ಚಿತ್ರಗಳನ್ನು ನೋಡಿದರೆ ಎಂಥವರ ಕರುಳು ಕಿವುಚಿ ಬರುತ್ತದೆ ಪೋಷಕರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ ಚೇಲ್ಲಾ ಪಿಲ್ಲಿಯಾಗಿ ಬಿದ್ದಿರುವ ಶಾಲಾ ಬ್ಯಾಗ್ಗಳು ಷೂಗಳು ನೋಡಿದರೆ ಅಪಘಾತದ ಭೀಕರತೆ ಎದ್ದು ಕಾಣುತ್ತದೆ ಸುಮಾರು ಐದು ಕಿಲೋ ಮೀಟರ್ ಟ್ರಾಫಿಕ್ ಜಾಮ್ ಆಗಿದೆ ಇದಕ್ಕೆಲ್ಲ ಕಾರಣ ಸರಿಯಾದ ರಸ್ತೆ ದುರಸ್ತಿಯಾಗದೇ ಇರುವುದು ಆದ ಕಾರಣ ಸ್ಥಳೀಯರು ಧರಣಿ ಕುಳಿತಿದ್ದಾರೆ…

ವರದಿ. ನಾಗರಾಜ್, ರಾಯಚೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *