ಮಹತ್ವಕಾಂಕ್ವಿ ಜಿಲ್ಲೆ ಕಾರ್ಯಕ್ರಮದಡಿ ಸಂಪೂರ್ಣತಾ ಅಭಿಯಾನದ ರಾತ್ರಿ ಚೌಪಲ್ ಕಾರ್ಯಕ್ರಮಕ್ಕೆ ಚಾಲನೆ
ಆರೋಗ್ಯದ ಮಟ್ಟ ಸುಧಾರಣೆಯಾಗಬೇಕು; ಜಿ.ಪಂ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ
ರಾಯಚೂರು,:- ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯಡಿ ರಾಯಚೂರು ಜಿಲ್ಲೆಯ ಸಿರವಾರ ಮತ್ತು ಮಸ್ಕಿ ತಾಲೂಕುಗಳು ಆಯ್ಕೆಯಾಗಿದ್ದು, ಈ ತಾಲೂಕಿಗಳಲ್ಲಿ ಜನರ ಆರೋಗ್ಯದ ಮಟ್ಟ ಸುಧಾರಣೆಯಾಗಬೇಕು ಎನ್ನುವುದು ಸರ್ಕಾರದ ಮೂಲ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳಾದ ಡಾ.ಟಿ.ರೋಣಿ ಅವರು ಹೇಳಿದರು.
ಅವರು ಆ.30ರ ಶುಕ್ರವಾರ ಸಂಜೆ ಜಿಲ್ಲೆಯ ಸಿರವಾರ ತಾಲೂಕಿನ ಚಿಂಚರಕಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ತಾಲೂಕ ಆಡಳಿತ ಹಾಗೂ ತಾಲೂಕ ಪಂಚಾಯತ್ ಸಿರವಾರ ಸಂಯುಕ್ತಾಶ್ರಯದಲ್ಲಿ ಮಹತ್ವಕಾಂಕ್ವಿ ಕಾರ್ಯಕ್ರಮದಡಿಯಲ್ಲಿ ಸಂಪೂರ್ಣತಾ ಅಭಿಯಾನದ ರಾತ್ರಿ ಚೌಪಲ್ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ, ಮಾತನಾಡಿದರು.
ಸಿರವಾರ ನೂತನ ತಾಲೂಕು ಆಗಿರುವುದರಿಂದ ಎಲ್ಲ ಅಂಶಗಳಲ್ಲಿ ಅಭಿವೃದ್ಧಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಆರೋಗ್ಯ, ಪೌಷ್ಟಿಕತೆ, ಕೃಷಿ, ಸಾಮಾಜಿಕ ಅಭಿವೃದ್ಧಿ ಈ ನಾಲ್ಕು ಅಂಶಗಳಲ್ಲಿ ಅಭಿವೃದ್ಧಿ ಸಾಧಿಸಲು ಸಂಪೂರ್ಣತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕ ಆಹಾರ ನೀಡಬೇಕು. ಮಕ್ಕಳ ಬೆಳವಣೆಗೆಗೆ ಪೂರಕ ವಾತವಾರಣ ಸೃಷ್ಠಿಸಬೇಕು ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ಸರಿಯಾದ ಸಮಯಕ್ಕೆ ಪುಸ್ತಕ ವಿತರಿಸಬೇಕು ಮತ್ತು ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕೆಂದರು.
ಮಹತ್ವಾಕಾಂಕ್ಷೆಯ ತಾಲೂಕಾಗಿದ್ದು, ಎಲ್ಲ ಇಲಾಖೆಗಳಲ್ಲೂ ಉಳಿದ ಪ್ರಗತಿ ಸಾಧಿಸಲು ಸಂಪೂರ್ಣತಾ ಅಭಿಯಾನ ಹಮ್ಮಿಕೊಂಡಿದೆ. ಆರೋಗ್ಯ, ಶಿಕ್ಷಣ ಸೇರಿ ಅಗತ್ಯ ಮೂಲಸೌಕರ್ಯ ಒದಗಿಸಿ ಸರ್ವಾಂಗೀಣ ಅಭಿವೃದ್ಧಿಸಾಧಿಸುವ ಗುರಿ ಹೊಂದಿದೆ. ಮಹತ್ವಾಕಾಂಕ್ಷೀ ಜಿಲ್ಲಾ ಮತ್ತು ಕಾರ್ಯಕ್ರಮದಡಿ ಪ್ರತಿ ಹಿಂದುಳಿದ ಹಳ್ಳಿಗೂ ಕೂಡ ಅತ್ಯಗತ್ಯವಾದ ಸೌಲಭ್ಯಗಳ್ಳನ್ನು ತಲುಪಿಸುವಂತ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದೆ, ನೀತಿ ಆಯೋಗವು ಸಂಪೂರ್ಣತ ಅಭಿಯಾನ ಆಯೋಜಿಸುವುದರ ಮೂಲಕ ಆರು ಸೂಚಾಂಕಗಳ ಶುದ್ಧತ್ವವನ್ನು ಸಾಧಿಸಲು ಪ್ರಯತ್ನಿಸುತ್ತಿದೆ.
ಮಹತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮದ ಅಡಿಯಲ್ಲಿ ಜುಲೈ4 ರಿಂದ ಸೆಪ್ಟೆಂಬರ್ 30, 3 ತಿಂಗಳಲ್ಲಿ ಆರು ನಿರ್ದಿಷ್ಟ್ಟ ಸೂಚಂಕ್ಯಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಲು ಸಂಪೂರ್ಣತ ಅಭಿಯಾನವನ್ನು ನೀತಿ ಆಯೋಗದ ಸೂಚನೆಯಂತೆ ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ಚಿಂಚರಕಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹುಲಿಗೆಮ್ಮ ಅಮರಯ್ಯ, ಉಪಾಧ್ಯಕ್ಷರಾದ ಗೌರಮ್ಮ ಕಟ್ಟೆಪ್ಪ, ಸದಸ್ಯರುಗಳಾದ ವಿರೇಶ ಸ್ವಾಮಿ, ಸಾವಿತ್ರಮ್ಮ, ಹರಳಯ್ಯ, ಸಿರವಾರ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಶಿಧರಸ್ವಾಮಿ, ತಾಲೂಕ ಆರೋಗ್ಯಾಧಿಕಾರಿ ಡಾ.ಶರಣಬಸವ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಗುರುನಾಥ, ಶಿಕ್ಷಣ ಇಲಾಖೆಯ ಸಿಆರ್‌ಪಿ ವೆಂಕಟೇಶ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶರೀಫ್ ಸಾಬ್, ಪ್ರದೀಪ್, ಕಾರ್ಯದರ್ಶಿ ಶರಣಪ್ಪ, ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ಜುಬೇದ್ ಬೇಗಂ, ಶಿಕ್ಷಕರು, ಎನ್.ಆರ್.ಎಲ್.ಎಮ್ ಯೋಜನೆಯ ವಲಯ ಮೇಲ್ವಿಚಾರಕ ಉಮೇಶ, ಐಇಸಿ ಸಂಯೋಜಕ ರಾಜೇಂದ್ರ, ಕರ ವಸೂಲಿಗಾರ ಮೌನೇಶ, ಪಿರಾಮಲ್ ಸಂಸ್ಥೆಯ ಹಿರಿಯ ಸಹಾಯಕ ಕಾರ್ಯಕ್ರಮ ಯೋಜನಾದಿಕಾರಿ ಕೌಶಿಕ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೇಲೋ, ಗಾಂಧಿ ಫೇಲೋದ ಸದಸ್ಯರು, ಪಂಚಾಯತ್ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಎಮ್.ಬಿ.ಕೆ, ಎಲ್.ಸಿ.ಆರ್.ಪಿ ಸ-ಸಹಾಯ ಸಂಘದ ಮಹಿಳೆಯರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು ಹಾಜರಿದ್ದರು…
ವರದಿ. ನಾಗರಾಜ್, ವಿ, ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030