ಯಾದಗಿರಿ : ತರಕಾರಿ ಹಣ ಹಾಗೂ ಸಂಬಳ ನೀಡುವ ವಿಚಾರವಾಗಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಅಡುಗೆ ಸಿಬ್ಬಂದಿ ನಡುವೆ ಮುನಿಸು ಉಂಟಾಗಿದ್ದರಿಂದ ಇದೀಗ ಸರ್ಕಾರಿ ಶಾಲೆಯಲ್ಲಿ ಕಳೆದ ಐದು ದಿನಗಳಿಂದ ಬಿಸಿ ಊಟ ಸ್ಥಗಿತವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಶಾಂತಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಸಿಬ್ಬಂದಿ ತಿಕ್ಕಾಟಕ್ಕೆ ಬಿಸಿಊಟ ಸ್ಥಗಿತವಾಗಿದೆ. ತರಕಾರಿ ಹಣ ಹಾಗೂ ಸಂಬಳ ನೀಡುವ ವಿಚಾರದಲ್ಲಿ ಮುನಿಸು ಮಾಡಿಕೊಂಡಿದ್ದು, ಸರ್ಕಾರಿ ಶಾಲೆ ಮುಖ್ಯ ಶಿಕ್ಷಕಿ ಹಾಗೂ ಅಡುಗೆ ಸಿಬ್ಬಂದಿಯ ಮಧ್ಯೆ ವೈಮನಸು ಉಂಟಾಗಿದೆ. ಹೀಗಾಗಿ ಶಾಲೆಯ 350ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಇದೀಗ ಇವರ ಒಂದು ಮುನಿಸಿನಿಂದ ಬಿಸಿಊಟ ಸ್ಥಗಿತವಾಗಿದೆ.
ಕಳೆದ ಐದು ದಿನಗಳಿಂದ ಬಿಸಿ ಊಟ ಇಲ್ಲದೆ ವಿದ್ಯಾರ್ಥಿಗಳು ಪರದಾಟ ನಡೆಸುತ್ತಿದ್ದಾರೆ. ಬಿಸಿ ಊಟ ಸ್ಥಗಿತಗೊಂಡರು, ಮುಖ್ಯ ಶಿಕ್ಷಕಿ ಯಾವುದೇ ಕ್ರಮ ಕೈಗೊಂಡಿಲ್ಲ. ಶಿಕ್ಷಕಿಯ ಈ ನಡೆಯಿಂದ ಗ್ರಾಮಸ್ಥರು ಮುಖ್ಯ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಖ್ಯ ಶಿಕ್ಷಕಿ ವಿರುದ್ಧ ಕ್ರಮಕ್ಕೆ ಎಸ್‌ಡಿಎಂಸಿ ಸದಸ್ಯರ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030