ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು/ ನೀವೇನು VA ಗಳ ಏಜೆಂಟ್ ನಿಮೆಗೆಲ್ಲಾ ಮಾನಮರ್ಯಾದೆ ಇಲ್ವಾ?? ಪ್ರಾಮಾಣಿಕರಾಗಿ ಕೆಲಸ ನಿರ್ವಹಿಸುವ ಇಚ್ಚೆ ಇದ್ದರೆ ಇರಿ ಇಲ್ಲ ಕೇತ್ರದಿಂದ ಹೊರಗೆ ಹೋಗಿ, ರಾಜ ಕಾರಣ ಇರುತ್ತೆ, ಹೋಗುತ್ತೆ ಮಾಡುವ ಕೆಲಸದಲ್ಲಿ ಬದ್ಧತೆ ಇರಬೇಕು. ಕಾಲಹರಣ ಮಾಡಿ ಪಗಾರ (ಸಂಬಳ) ಪಡೆಯುವ ಯಾವೊಬ್ಬ ಅಧಿಕಾರಿಯ ಅಗತ್ಯ ನನಗಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಕಂದಾಯ ಇಲಾಖೆ ಅಧಿ ಕಾರಿಗಳಿಗೆ ಖಡಕ್ ಎಚ್ಚರಿಕೆ ? ನೀಡಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ಬಗರ್ ಹುಕುಂ ಸಮಿತಿ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಚಳ್ಳಕೆರೆ ತಾಲೂಕಿನ ತಳಕು ಮತ್ತು ನಾಯಕನಹಟ್ಟಿ ಮೊಳಕಾಲ್ಮುರು ತಾಲೂಕಿನ ಕಸಬಾ ಮತ್ತು ದೇವಸಮುದ್ರ ಸೇರಿ ನಾಲ್ಕು ಹೋಬಳಿಯಲ್ಲಿ 8 ಸಾವಿರಕ್ಕೂ ಹೆಚ್ಚಿನ ರೈತರ ಅರ್ಜಿಗಳಿದ್ದು ಅದರಲ್ಲಿ 764 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಸಭೆಯಲ್ಲಿ ತಹಸೀ ಲ್ದಾರ್ ಮಲ್ಲಿಕಾರ್ಜುನ ವಿಷಯ ಪ್ರಸ್ತಾಪಿಸಿದಾಗ, ಗರಂ ಆದ ಸಚಿವರು, 8 ಸಾವಿರ ಅರ್ಜಿಗಳಲ್ಲಿ ಕೇವಲ ಇಷ್ಟೇ ಅರ್ಜಿಗಳು ವಿಲೇವಾರಿ ಮಾಡಿದ್ದೀರಿ ಎಂದರೆ ನೀವೇನು ಕೆಲಸ ಮಾಡಿದ್ದೀರಿ? ಬಗರ್ ಹುಕುಂ ಅರ್ಜಿಗಳ ಕುರಿತು ಕಳೆದ 6 ತಿಂಗಳಿನಿಂದ ಹೇಳಿದ್ದೇನೆ. ಆದರೂ, ಅರ್ಧದಷ್ಟು ಕೆಲಸ ಮಾಡಿಲ್ಲ ಎಂದರೆ ಹೇಗೆ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಮಲ್ಲಿಕಾರ್ಜುನ ಪ್ರತಿ ರಾಸುಗೆ ಇಂತಿಷ್ಟು ಜಮೀನು ಇರಬೇಕು ಅನ್ನು ವ ನಿಯಮ ಇದೆ. ಕಡಿಮೆ ಇದ್ದರೆ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು ಎಂದಾಗ, ಉತ್ತರಿಸಿದ ಸಚಿವರು, ಕ್ಷೇತ್ರದಲ್ಲಿ ಬಹುತೇಕ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಸಮುದಾಯಗಳೇ ಹೆಚ್ಚಾಗಿ ವಾಸಮಾಡುತ್ತಿದ್ದಾರೆ. ಮೂರಾಲ್ಕು ದಶಕದಿಂದ ಸಾಗುವಳಿ ಮಾಡಿಕೊಂಡಿದ್ದಾರೆ. ಸರ್ಕಾರದ ನಿಯ ಮಾವಳಿ ಪ್ರಕಾರ ಸಾಗುವಳಿದಾರರು ಇದ್ದರೆ ಹಕ್ಕು ಪತ್ರಗಳು ನೀಡಲು ಪ್ರಾಮಾಣಿಕತೆ ಇರಬೇಕು. ಸ್ಥಳೀಯ ಒತ್ತಡಗಳಿಗೆ ಮಣಿಯದೆ ಕೆಲಸಮಾಡಬೇಕು ಎಂದು ಹೇಳಿದರು. ತಾಲ್ಲೂಕಿನಲ್ಲಿ ಸರಿ ಸುಮಾರು 15 ಸಾವಿರ ರೈತರು ಆಕ್ರಮ-ಸಕ್ರಮ ಅಡಿ ಹೊಸದಾಗಿ ಅರ್ಜಿ ಹಾಕುವ ರೈತ ಫಲಾನುಭವಿಗಳು ಇರುವುದರಿಂದ ಪ್ರಸ್ತುತ ರಾಜ್ಯ ಸರ್ಕಾರದ ಆದೇಶವಿದ್ದರೂ ಫಾರಂ ನಂಬರ್ ಬಿಡುಗಡೆಯಾಗಿಲ್ಲ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ ಕಾರ್ಯದರ್ಶಿ ಜಾಫರ್ ಶರೀಫ್ ತಿಳಿಸಿದರು. ಇವರು ಪಟ್ಟಣದ ತಾಪಂ ಸಭಾಂಗಣದಲ್ಲ ಹಮ್ಮಿಕೊಂಡಿದ್ದ ಬಗರ್‌ಹುಕುಂ ಸಮಿತಿ ಸಭೆಯಲ್ಲಿ ಮಾತನಾಡಿ, ಇಂದು ರಾಜ್ಯದಲ್ಲಿ ಮೊಟ್ಟಮೊದಲು ಫಾರಂ ನಂಬರ್ 57 ರೈತರ ಅರ್ಜಿ ಅಕ್ರಮ- ಸಕ್ರಮ ಗೊಳಿಸುವ ಬಗರ್ ಹುಕುಂ ಸಮಿತಿ ಸಭೆ ಕರೆದಿರುವುದು ರೈತರಿಗೆ ಖುಷಿ ತಂದಿದೆ. ಏಕೆಂದರೆ ಸರಿ ಸುಮಾರು ವರ್ಷಗಳಿಂದ ಸರ್ಕಾರಿ ಕಂದಾಯ ಮತ್ತು ಗೋಮಾಳ ಹುಲ್ಲು ಬನ್ನಿ ಕರಾಬು ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿರುವ ನಮಗೆ ಅಕ್ರಮ-ಸಕ್ರಮದಡಿ ಫಹಣಿ ನೀಡುವಬೇಕು. ಈ ಹಿಂದೆ ನೆನೆಗುದಿಗೆ ಬಿದ್ದಿದ್ದ ಫಾರಂ ನಂಬರ್ 50 ಮತ್ತು 53ರಲ್ಲಿ ಬಾಕಿ ಉಳಿದ 310 ಅರ್ಜಿ ಪರಿಗಣನೆ ತೆಗೆದುಕೊಳ್ಳುವ ಜೊತೆಗೆ ಹಾಲಿ ಫಾರಂ ನಂಬರ್ 57ರ 1483 ಅರ್ಜಿ ಪರಿಶೀಲಿಸಿ ಸೂಕ್ತ ರೈತ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಬೇಕು. ಕೆಲ ಗ್ರಾಮಗಳಲ್ಲಿ ಸರ್ವೇ ನಂಬರ್‌ಗಳಲ್ಲಿ ಕೆಲ ಸಣ್ಣ ನ್ಯೂನತೆಗಳಿದ್ದು ಕೆಲ ಅಂಶ ಬಗರಹುಕುಂ ಸಮಿತಿ ಸದಸ್ಯರ ಮತ್ತು ಸಮಿತಿಯ ಕಾರ್ಯದರ್ಶಿ ತಹಸೀಲ್ದಾರ್ ಅವರ ಗಮನಕ್ಕೆ ತರಲಾಗಿದೆ. ಅದೇ ರೀತಿ, ತಾವುಗಳು ದಯಮಾಡಿ ಕಂದಾಯ ಇಲಾಖೆಯ ಸಚಿವರ ಗಮನ ಸೆಳೆಯುವ ಮುಖಾಂತರ ರೈತರ ಅಕ್ರಮ ಸಕ್ರಮಕ್ಕೆ ಅರ್ಜಿ ಹಾಕುವ ಅನುವು ಮಾಡಿಕೊಡಬೇಕು ಎಂದು ತಿಳಿಸಿದ್ದರು. ಈ ಸಂದರ್ಭದಲ್ಲಿ ಸಿಪಿಐ ಕಾರ್ಯಕರ್ತ ಕಾಮಯ್ಯ,ಆನಂದ, ಅರಕಲು ಬಸಣ್ಣ, ವೆಂಕಟೇಶ, ಮಾರಣ್ಣ, ಓಬಣ್ಣ, ಶ್ರೀದೇವಿ, ಮಲ್ಲಮ್ಮ, ಪದ್ಮಾವತಿ, ಪಾರ್ವತಿ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
