ಕೋನಸಾಗರ: ಗುತ್ತಿಗೆದಾರರ ಕಮಿಷನ್ ಹಾವಳಿ ತಪ್ಪಿಸಿ! ಕೂಲಿ ಹಣ ಸ್ಥಳದಲ್ಲೇ ನೀಡಿ-ಸಿ.ಇ.ಓ. ನಂದಿನಿದೇವಿ.!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು ತಾಲ್ಲೂಕಿನ ಕೋನಸಾಗರ ಗ್ರಾಮ ಪಂಚಾಯಿತಿಯಲ್ಲಿ ಇಂದು ನರೇಗಾಯೋಜನೆಯಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು ಎನ್ನುವ ಕಾರಣಕ್ಕೆ ಸರ್ಕಾರ ಮಹಿಳಾ ಕಾಯಕೋತವ ಜಾರಿ ಮಾಡಿದೆ. ಗ್ರಾಮೀಣ ಭಾಗದ ಮಹಿಳೆಯರು ಸೌಲಭ್ಯವನ್ನು ಸದುಪಯೋಗ
ಪಡೆದುಕೊಂಡು ಸ್ವಾವಲಂಬಿಗಳಾಗಿ ಬಾಳಬೇಕೆಂದು ಜಿ.ಪಂ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಹೇಳಿದರು. ತಾಲೂಕಿನ ಕೋನಸಾಗರ ಗ್ರಾಪಂನಲ್ಲಿ ನಡೆದ ಜಿಪಂ, ಜಿಲ್ಲಾ ಲೀಡ್ ಬ್ಯಾಂಕ್, ತಾಲೂಕು ಮತ್ತು ಗ್ರಾಪಂ ಸಹಯೋಗದಲ್ಲಿ ಆಯೋಜಿಸಿದ್ದ ಕೂಲಿ ಹಣ ಆಂದೋಲನ ಹಾಗೂ ಮಹಿಳಾ ಕಾಯಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಮಹಿಳೆಯರಿಗೆ ಎಲ್ಲ ಕ್ಷೇತ್ರದಲ್ಲೂ ಸಮಾನ ಅವಕಾಶಗಳು ಇವೆ. ಕೇವಲ ಅಡುಗೆ ಮನೆಗೆ ಸೀಮಿತರಾಗದೆ ಸಿಗುವಂತ ಸೌಲಭ್ಯಗಳನ್ನು ಸದ್ವಿನಿಯೋಗ ಪಡೆದುಕೊಳ್ಳಬೇಕು. ನರೇಗಾ ಯೋಜನೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಕೊಡುವ ನಿಟ್ಟಿನಲ್ಲಿ ಸರ್ಕಾರ ಮಹಿಳಾ ಕಾಯಕೋತವ ಜಾರಿ ಮಾಡಿದೆ. ನರೇಗಾ ಯೋಜನೆಯಲ್ಲಿ ಮಹಿಳೆಯರು ಹೆಚ್ಚು ಪಾಲ್ಗೊಳ್ಳಬೇಕು. ದೂರದ ಊರಿಗೆ ಗುಳೆ ಹೋಗುವೆ ಬದಲು ನಿಮ್ಮ ಊರಿನಲ್ಲಿಯೇ ಸಿಗುವಂತ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕೆಲಸವನ್ನು ನಿರ್ವಹಿಸಿ ಸ್ವಾವಲಂಬಿಗಳಾಗಿ ಬಾಳಬೇಕು ಎಂದು ಹೇಳಿದರು. ಜಿ.ಪಂ ಸಿಇಒ ನಂದಿನಿದೇವಿ ಮಾತನಾಡಿ, ಮಹಿಳೆಯರನ್ನು ಸ್ವಾಭಿಮಾನಿಗಳನ್ನಾಗಿಸಲು ನರೇಗಾ ಯೋಜನೆಯಲ್ಲಿ ಕಾಯಕೋತ್ಸವ ಜಾರಿ ಮಾಡಿದೆ. ಈಗಿರುವ ಜಾಬ್ ಕಾರ್ಡ್‌ಗಳಲ್ಲಿ ಶೇ.5ರಷ್ಟು ನಡೆಸಲು ಸಿಬ್ಬಂದಿ ಮಹಿಳೆಯರಿಗೆ ಹೆಚ್ಚಳ ಮಾಡಿ ಆದ್ಯತೆ ನೀಡಲಾಗಿದೆ. ನರೇಗಾ ಯೋಜನೆಯಲ್ಲಿ ಮಹಿಳೆಯರು ಹೆಚ್ಚು ಪಾಲ್ಗೊಳ್ಳಬೇಕು. ಈಗಾಗಲೇ ಜಾಬ್ ಕಾರ್ಡ್‌ಗಳ ಫಲಾನುಭವಿಗಳ ಸರ್ವೆ ನಿಯೋಜಿಸಲಾಗಿದೆ. ಸರ್ವೆ ಸಿಬ್ಬಂದಿ ಮನೆಗೆ ಬಂದಾಗ ಜಾಬ್ ಕಾರ್ಡ್ ಬೇಕಿದರೆ ತಿಳಿಸಿದರೆ ಕೂಡಲೇ ಜಾಬ್ ಕಾರ್ಡ್‌ಗಳನ್ನು ಪಡೆಯಬೇಕು. ಕೂಲಿ ಬೇಕೆಂದು ಸಂಬಂಧಿಸಿದ ಗ್ರಾಪಂಗೆ ಅರ್ಜಿ ನೀಡಿದರೆ 15 ದಿನದೊಳಗೆ ಕೂಲಿ ನೀಡಲಾಗುವುದು. ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ 15 ದಿನಗಳ ಒಳಗಾಗಿ ಕೂಲಿ ವಿತರಿಸಲಾಗುವುದು. ಕೂಲಿಕಾರರಿಗೆ ಮನೆ ಬಾಗಿಲಿಗೆ ಬಂದು ಹಣ ಸಂದಾಯ ಮಾಡುವಂತೆ ಬ್ಯಾಂಕಿಗ್ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ಬ್ಯಾಂಕಿಂಗ್ ಸೌಲಭ್ಯ ಇಲ್ಲದ ಗ್ರಾಮಗಳ ಫಲಾನುಭವಿಗಳಿಗೆ ನೆರವಾಗಲಿದೆ. ಇದರಿಂದ ಮದ್ಯಸ್ಥಿಕೆದಾರರು ನಡೆಸಬಹುದಾದ ಲಾಬಿಗಳನ್ನು ತಪ್ಪಿಸಬಹುದು. ಗ್ರಾ.ಪಂ ಅಧಿಕಾರಿಗಳು ಹೆಚ್ಚು ಪ್ರಚಾರ ನೀಡಬೇಕು. ನರೇಗಾ ಯೋಜನೆ ಮಹಿಳಾ ಕಾಯಕೋತ್ಸವ ಕುರಿತು ಅರಿವನ್ನು ಮೂಡಿಸಬೇಕು ಎಂದು ಹೇಳಿದರು. ಗ್ರಾ.ಪಂ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷ ಪಾಲಯ್ಯ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ, ತಾ.ಪಂ ಮ್ಯಾನೇಜರ್ ನಂದೀಶ್, ಪಿಡಿಒ ದೇವೇಂದ್ರಪ್ಪ ಮತ್ತಿತರರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *