ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು/ ತಾಲೂಕಿನ ಅಶೋಕ ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ಹನುಮಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ ಉದ್ಘಾಟನೆ ಮತ್ತು ಮಣ್ಣು, ಜಲ ಸಂರಕ್ಷಣಾ, ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ಎಸ್.ಎಲ್. ಪಾಟೀಲ್ ಉದ್ಘಾಟಿಸಿದರು ಹೇಳಿದರು. ಬುಡಕಟ್ಟು ಜನಾಂಗದ ಉಪಯೋಜನೆಯಡಿ ಯಲ್ಲಿ ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣಾ ಕೇಂದ್ರ, ಬಳ್ಳಾರಿ ಆವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶುದ್ಧ ಕುಡಿ
ಯುವ ನೀರಿನ ಘಟಕ ಉದ್ಘಾಟನೆ ಮತ್ತು ರೈತ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಯಾವುದೇ ಬೆಳೆ ಬೆಳೆಯಬೇಕಾದರೆ ನೀರು ಮತ್ತು ಮಣ್ಣಿನ ಸಂಪನ್ಮೂಲಗಳು ಉತ್ತಮ ವಾಗಿರಬೇಕು. ನೀರು ಮತ್ತು ಮಣ್ಣಿನ ಗುಣ ಮಟ್ಟದ ಆಧಾರದಲ್ಲಿ ಬೆಳೆಯಲ್ಲಿ ಲಾಭವನ್ನು ನಿರೀಕ್ಷಿಸಬಹುದು. ಸ್ವಾಭಾವಿಕವಾಗಿ ಭೂಮಿಯಲ್ಲಿ ಒಂದು ಇಂಚು ಮಣ್ಣು ತಯಾರಾಗಲು ಸಾವಿರಾರು ವರ್ಷಗಳೇ ಬೇಕಾಗುತ್ತದೆ. ಭೂಮಿಯಲ್ಲಿ ಕೃಷಿಗೆ ಬೇಕಾದಂತಹ ಅನೇಕ ಪೋಷಕಾಂಶಗಳು ಇವೆ. ಆದರೆ, ಪ್ರಸ್ತುತ ದಿನಗಳಲ್ಲಿ ರೈತರು ಅಧಿಕ ಲಾಭದ ಆಸೆಯಿಂದಾಗಿ ಕೃಷಿಯಲ್ಲಿ ಅತಿ ಹೆಚ್ಚು ರಸಾಯನಿಕ ಬಳಕೆ ಮಾಡುತ್ತಿದ್ದಾರೆ. ಇದರಿಂದ ಭೂಮಿಯ ಮೇಲ್ಮ ಹಾಳಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಜನಸಂಖ್ಯೆ ಹೆಚ್ಚಿದಂತೆ ಕೈಗಾರಿಕೆ ಮತ್ತು ನಗರೀಕರಣದ ನೆಪದಲ್ಲಿ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ರೈತರು ಭೂ ಸವಕಳಿಯನ್ನು ತಡೆಗಟ್ಟಬೇಕು. ಮಣ್ಣು ಕೊಚ್ಚಿ ಹೋದರೆ ರೈತರಿಗೆ ಅತಿ ದೊಡ್ಡ ನಷ್ಟವಾಗಲಿದೆ. ಹಾಗಾಗಿ, ರೈತರು ಮಣ್ಣು ನೀರಿನ ಸಂರಕ್ಷಣೆಯ ಕುರಿತು ಅರಿವನ್ನು ಪಡೆದುಕೊಳ್ಳಬೇಕು. ಮಳೆ ನೀರನ್ನು ಇಂಗುವಂತೆ ಮಾಡಬೇಕು. ಜಮೀನುಗಳಲ್ಲಿ ಬದುಗಳನ್ನು ನಿರ್ಮಿಸಬೇಕು. ಕೃಷಿ ಹೊಂಡ ,ಚೆಕ್‌ಡ್ಯಾಂಗಳನ್ನು ನಿರ್ಮಿಸಿ ನೀರು ಸಂರಕ್ಷಣೆ ಮಾಡಿದರೆ ಕೃಷಿಯನ್ನು ಉತ್ತಮ ಪಡಿಸಿಕೊಳ್ಳಬಹುದು ಎಂದರು. ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಬಿ.ಎಸ್.ನಾಯಕ್ ಮಾತನಾಡಿ, ನೀರು ಪ್ರತಿ ಜೀವಿಗೂ ಅಮೂಲ್ಯವಾಗಿದೆ. ಪ್ಲೋರೈಡ್ ನೀರಿನ ಸೇವನೆಯಿಂದಾಗಿ ಜನ ನಾನಾ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಪ್ರತಿಯೊಬ್ಬರೂ ಶುದ್ಧ ಕುಡಿಯುವ ನೀರಿನ ಸೇವನೆ ಮಾಡಬೇಕು. ಜತೆಗೆಶುದ್ದ ಕುಡಿಯುವ ನೀರಿನ ಘಟಗಳನ್ನು ಶುದ್ದವಾಗಿ ನಿರ್ವಹಿಸಿಕೊಳ್ಳುವ ಮೂಲಕ ನೀರಿನ್ನು ಹೆಚ್ಚು ವ್ಯರ್ಥ ಮಾಡದೆ ಮಿತವಾಗಿ ಬಳಕೆ ಮಾಡಿಕೊಂಡು ನೀರಿನ ಸಂಪನ್ಮೂಲವನ್ನು ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು. ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ರಮೇಶ, ಡಾ.ರವಿ ದುಪ್ಪಾಲ್, ಕೆ.ಎನ್.ರವಿ, ತಾಪಂ ಇಒ ಪ್ರಕಾಶ, ಗ್ರಾಮಸ್ಥರಾದ ಡಿ.ಎಸ್ ಪರಮೇಶಪ್ಪ, ಎಸ್.ಹನುಮಂತಪ್ಪ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಾರಣ್ಣ, ಹಿರಿಯ ಲೆಕ್ಕಾಧಿಕಾರಿ ಸಿದ್ದೇಶ, ಮುಖ್ಯ ಶಿಕ್ಷಕ ಈಶ್ವರಪ್ಪ, ಸಂಪನ್ಮೂಲ ವ್ಯಕ್ತಿ ಕಿರಣ್ ಕುಮಾರ್ ಇನ್ನಿತರರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
