ಉಟಕನೂರು ಗ್ರಾಮ ಪಂಚಾಯಿತಿಯ ಅವಿಶ್ವಾಸ ಸಭೆ ನಿರ್ಣಯ
ಮಾನವಿ :ತಾಲೂಕಿನ ಉಟಕನೂರು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಈರಮ್ಮ ಅಮರಪ್ಪ ತಡಕಲ್ ವಿರುದ್ದ ಗ್ರಾ.ಪಂ. ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದರಿಂದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಸಹಾಯಕ ಆಯುಕ್ತರಾದ ಗಜಾನನ ಬಾಳೆ ಅಧ್ಯಕ್ಷತೆಯಲ್ಲಿ ನಡೆದ ಅವಿಶ್ವಾಸ ನಿರ್ಣಯ ಮಂಡನೆ ಸಭೆಗೆ ನಿಗದಿತ ವೇಳೆಗೆ ಗ್ರಾ.ಪಂ. ಸದಸ್ಯರು ಬಾರದೆ ಗೈರು ಹಾಜರಾಗಿದ್ದಾರಿಂದ ಅಧ್ಯಕ್ಷೆಯ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ ಎಂದು ಜಿಲ್ಲಾ ಸಹಾಯಕ ಆಯುಕ್ತರಾದ ಗಜಾನನ ಬಾಳೆ ಘೋಷಿಸಿದರು.
ಇದ್ದರಿಂದ ಗ್ರಾ.ಪಂ. ಅಧ್ಯಕ್ಷೆ ಈರಮ್ಮ ಅಮರಪ್ಪ ತಡಕಲ್
ಮುಂದಿನ ಅವಧಿಯವರೆಗೂ ಅಧ್ಯಕ್ಷರಾಗಿ ಮುಂದುವರೆಯುವುದಕ್ಕೆ ಅವಕಾಶವಾದಂತಾಯಿತು.
ಉಟಕನೂರು ಗ್ರಾಮ ಪಂಚಾಯಿತಿ 19 ಸದಸ್ಯರ ಬಲ ಹೊಂದಿದ್ದು ಅಧ್ಯಕ್ಷ ಸ್ಥಾನ ಪ.ಜಾತಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಈರಮ್ಮ ಅಮರಪ್ಪ ತಡಕಲ್ ಅಧ್ಯಕ್ಷರಾಗಿ
ಆಯ್ಕೆಯಾಗಿದ್ದರು ಗ್ರಾಪಂಚಾಯಿತಿಯ 13 ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ- ರಿಂದ ಇಂದು ಜಿಲ್ಲಾ ಸಹಾಯಕ ಅಯುಕ್ತರಾದ ಗಜಾನನ ಬಾಳೆ ಅಧ್ಯಕ್ಷತೆಯಲ್ಲಿ ನಡೆದ ಅವಿಶ್ವಾಸ ನಿರ್ಣಯ ಮಂಡನೆ ಸಭೆಯಲ್ಲಿ ಅವಿಶ್ವಸ ನಿರ್ಣಯ ಮಂಡಿಸಿದ
ಸದಸ್ಯರೆ ಗೈರಾದರಿಂದ ಅವಿಶ್ವಾಸ ನಿರ್ಣಯಕ್ಕೆ ಸೋಲಾಯಿತು.
ಈ ಸಂದರ್ಭದಲ್ಲಿ
ಗ್ರಾಮ ಪಂಚಾಯಿತಿ ಪಿ.ಡಿ.ಓ. ಶ್ವೇತಾ ಕುಲಕರ್ಣಿ, ಕಾರ್ಯದರ್ಶಿ ಸಿದ್ದಯ್ಯಸ್ವಾಮಿ, ಮಲ್ಲೇಶ ತಡಕಲ್,ಶಿವಕುಮಾರ, ನಾಗರಾಜ, ರೇವಣ್ಣ ಸಿದ್ದಯ್ಯ, ಗ್ರಾಮ ಲೆಕ್ಕಾಧಿಕಾರಿಗಳಾದ ಸುಶೀಲ, ಕವಿತಾಳ ಆರಕ್ಷಕ ಠಾಣೆ ನಿರೀಕ್ಷಕರದ ವೆಂಕಟೇಶ್ ನಾಯಕ್ ಹಾಗೂ ಠಾಣೆಯ ಸಿಬ್ಬಂದಿಗಳು ಹಾಗೂ ಸುತ್ತಮುತ್ತಲಿನ ಹಿರಿಯ ಮುಖಂಡರು ಗ್ರಾಮಸ್ಥರು ಸೇರಿದಂತೆ ಇನ್ನಿತರರು ಇದ್ದರು…
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030