ಶಿರಸಂಗಿ ಪಾದಯಾತ್ರೆ ಮುಕ್ತಾಯ ಕಾರ್ತಿಕ್ ಮಾಸದ ಪ್ರಯುಕ್ತ ದೀಪೋತ್ಸವ
ಸಿಂಧನೂರು ತಾಲೂಕಿನ ಮುಕ್ಕುಂದಿ ಗ್ರಾಮದ ಶ್ರೀ ಕಾಳಿಕಾದೇವಿ ದೇವಸ್ಥಾನದಿಂದ ಶಿರಸಂಗಿ ಶ್ರೀ ಕಾಳಿಕಾದೇವಿ ದೇವಸ್ಥಾನದವರೆಗೆ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆ ಇಂದು ಮುಕ್ತಾಯಗೊಡು, ಶಿರಸಂಗಿಯ ಗುಡ್ಡದ ಮೇಲಿನ ಮೌನೇಶ್ವರ ಗವಿ ದೇವಸ್ಥಾನದಲ್ಲಿ ಕಾರ್ತಿಕ್ ಮಾಸದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ,ದೀಪೋತ್ಸವ ಕಾರ್ಯಕ್ರಮ ನೆರವೇರಿಸಲಾಯಿತು .
ಈ ಸಂಧರ್ಭದಲ್ಲಿ ಸಿಂಧನೂರು ವಿಶ್ವಕರ್ಮ ಸಮಾಜದ ಸಂಘಟನಾ ಕಾರ್ಯದರ್ಶಿ ಚನ್ನಪ್ಪ ಕೆ. ಹೊಸಹಳ್ಳಿ,ಹಾಗೂ ಸದಸ್ಯರು,ಮುಕ್ಕುಂದಿ ಶ್ರೀ ಕಾಳಿಕಾದೇವಿ ಅರ್ಚಕರಾದ ಬಸವರಾಜ,ಜೀವಣ್ಣ ನಾಗನಕಲ್ಲು, ವೀರೇಶ ಕಾರಟಗಿ,ಬಸನಗೌಡ ಮುಕ್ಕುಂದಾ ಹಾಗೂ ಮಹಿಳೆಯರು ಇದ್ದರು…
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030