ತಡಕಲ್ ಗ್ರಾಮದಲ್ಲಿ ಏಕಲವ್ಯ ದೊಡ್ಡಾಟ ಸಂಘ ತಡಕಲ್ (ರಿ) ಇವರಿಂದ ಸಂಗೀತ ಸಂಭ್ರಮ
ತಡಕಲ್ :-ಏಕಲವ್ಯ ದೊಡ್ಡಾಟ ಸಂಘ ತಡಕಲ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ಇವರ ಸಹಯೋಗದೊಂದಿಗೆ 69ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಸಂಗೀತ ಸಂಭ್ರಮ… ಕಾರ್ಯಕ್ರಮವು ತಡಕಲ್ ಗ್ರಾಮದ ಭಜಂತ್ರಿ ಸಮುದಾಯ ಭವನ ದಲ್ಲಿ ನಡೆಯಿತು… ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಶ್ರೀ ಆರೂಢ ಅಯ್ಯಪ್ಪ ತಾತನವರು ಮಲ್ಲದಗುಡ್ಡ ಪೂಜ್ಯಶ್ರೀ ರಂಗಯ್ಯ ತಾತನವರು ಬುದ್ದಿನ್ನಿ ಶ್ರೀ ಶರಣಪ್ಪ ತಾತನವರು ಕುರುಡಿ ಶ್ರೀ ಪೂಜ್ಯ ಅಣ್ಣಯ್ಯ ತಾತನವರು ತಡಕಲ್ ಉದ್ಘಾಟಕರಾಗಿ ಶ್ರೀಶೈಲಗೌಡ ಮಾಲಿ ಪಾಟೀಲ್ ತಡಕಲ್ ಡಾಕ್ಟರ್ ಬಸವರಾಜಪ್ಪ ಪೋತ್ನಾಳ್ ಶಿವರಾಜಪ್ಪ ಧಣಿ ನೂರಾರು ಕಲಾವಿದರು ಹಾಗೂ ಗ್ರಾಮದ ಜನತೆ ಇದ್ದರು…
ಡಾ ಪ್ರಕಾಶಯ್ಯ ನಂದಿ ಜಿಲ್ಲಾಧ್ಯಕ್ಷರು ಮೊಬೈಲ್ ಮತ್ತು ದೂರದರ್ಶನಗಳು ಇಂದಿನ ಪೀಳಿಗೆಗೆ ಮಾರಕವಾಗಿದ್ದು ತಾವೆಲ್ಲರೂ ಕಲೆಯನ್ನ ಉಳಿಸಿ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು..
ಉದ್ಘಾಟಕರಾಗಿ ಊರಿನ ಹಿರಿಯರಾದ ಶ್ರೀಶೈಲಗೌಡ್ರು ಏಕಲವ್ಯ ದೊಡ್ಡಾಟ ಸಂಘದ ಕಾರ್ಯಕ್ರಮ ಶ್ಲಾಘನೀಯ.. ಇದೇ ರೀತಿ ಕಲಾ ಸೇವೆಯನ್ನು ಮುಂದುವರಿಸಿ ಎಂದು ಕರೆ ನೀಡಿದರು..
ನಮಗೆ ಸದಾ ಬೆಂಬಲವಾಗಿ ನಿಂತಿರುವ ಸದಾ ಪ್ರೋತ್ಸಾಹ ನೀಡುತ್ತಿರುವ ನನ್ನೆಲ್ಲ ಆತ್ಮೀಯ ರಿಗೂ ಹಾಗು ಗ್ರಮಸ್ತರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದರಿಂದ ಮತ್ತಷ್ಟು ಕಲಾ ಸೇವೆ ಮಾಡುವ ಹುಮ್ಮಸ್ಸು ಚೈತನ್ಯ ಇಮ್ಮಡಿಯಾಯಿತು……ಎಲ್ಲರಿಗೂ ಧನ್ಯವಾದಗಳು ಎಂದು ಏಕಲವ್ಯ ದೊಡ್ಡಾಟ ಸಂಘದ (ರಿ) ತಡಕಲ್ ಅಧ್ಯಕ್ಷರಾದ ಶ್ರೀ ರಂಗಪ್ಪ ಮಾಸ್ತರ್ ತಡಕಲ್ ಮತ್ತು ಪ್ರಧಾನ ಕಾರ್ಯದರ್ಶಿಯಾದ ಶರಣಪ್ಪ ನಾಯಕ್ ತಡಕಲ್ ತಿಳಿಸಿದರು…
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030