ಬಾಗಲವಾಡ ಶ್ರೀ ವಿದ್ಯಾ ಭಾರತಿ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ.
ಸಿರವಾರ: ತಾಲ್ಲೂಕಿನ ಬಾಗಲವಾಡ ಗ್ರಾಮದ ಶ್ರೀ ವಿದ್ಯಾಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು..ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಶ್ರೀ ಅಮರೇಶ ದೇಸಾಯಿ ಅವರು ಮಾತನಾಡಿ ಯೋಗ ಮಾಡಿ ನಿರೋಗಿಯಾಗು..ಇಂದು ಭಾರತದ ಯೋಗ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಬೇಡಿಕೆಯಿದೆ..ಇಡೀ ಜಗತ್ತು ಭಾರತದ ಯೋಗದತ್ತ ನೋಡುತ್ತಿದೆ..ಎಂದರು..ಪ್ರಾಸ್ತಾವಿಕವಾಗಿ ಮುಖ್ಯಗುರುಗಳಾದ ಶ್ರೀ ಅಮರೇಶ ದ್ಯಾವಣ್ಣವರ..ಮಾತನಾಡಿದರು..ಗಂಗಮ್ಮ ಗುರುಮಾತೆ ನಿರೂಪಿಸಿದರು.ಶಿವಮ್ಮ ಗುರುಮಾತೆ ಸ್ವಾಗತಿಸಿದರೆ ಗೌರಮ್ಮ ಯಾದವ ಗುರುಮಾತೆ ವಂದಿಸಿದರು…ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಿವಿಧ ಯೋಗಗಳ ಮಾಹಿತಿ ಉಪಯುಕ್ತತೆ ಪ್ರಾತ್ಯಕ್ಷಿಕೆ ನೀಡಲಾಯಿತು..ಪ್ರತಿದಿನ ಎಲ್ಲರೂ ಯೋಗ ಮಾಡಿ ಸದೃಢ ಸಮರ್ಥ ಭಾರತ ನಿರ್ಮಿಸಲು ಅಣಿಯಾಗೋಣ ಎಂಬ ಆಶಯದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030