ಸಮಗ್ರ ನೀರಾವರಿ,ಏಮ್ಸ್ ಮಂಜೂರಾತಿಗಾಗಿ ಸಂಕಲ್ಪ ಸಮಾವೇಶ…!!!

Listen to this article

ಸಮಗ್ರ ನೀರಾವರಿ,ಏಮ್ಸ್ ಮಂಜೂರಾತಿಗಾಗಿ ಸಂಕಲ್ಪ ಸಮಾವೇಶ

ಮಾನವಿ: ಮಾಜಿ ಸಚಿವರಾದ ಕೆ. ಶಿವನಗೌಡ ನಾಯಕ ಅವರ 48ನೇ ಹುಟ್ಟುಹಬ್ಬದ ಪ್ರಯುಕ್ತ, ರಾಯಚೂರು ಜಿಲ್ಲೆಗೆ ಸಮಗ್ರ ನೀರಾವರಿ ಹಾಗೂ ಏಮ್ಸ್ ಮಂಜೂರಾತಿಗಾಗಿ ಜನಪರ ಪಕ್ಷಾತೀತ ಸಂಕಲ್ಪ ಸಮಾವೇಶವನ್ನು ಆಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಈ ಮಹತ್ವದ ಸಭೆಯು ಆರೋಗ್ಯ, ಕೃಷಿ ಮತ್ತು ರೈತರ ಹಿತದೃಷ್ಟಿಯಿಂದ, ಬುದ್ಧಿಜೀವಿಗಳು, ಪ್ರಗತಿಪರ ಚಿಂತಕರು, ಜನಪರ ಹೋರಾಟಗಾರರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರಮುಖರನ್ನು ಒಂದೇ ವೇದಿಕೆಯಲ್ಲಿ ಒಂದು ಕನಸು ಮತ್ತು ಸಂಕಲ್ಪಕ್ಕೆ ಒಳಗೊಂಡಂತೆ ಒಟ್ಟುಗೂಡಿಸಲಿದೆ.

ಕೆ.ಶಿವನಗೌಡ ನಾಯಕ್ ಅವರು ಜಿಲ್ಲಾ ಅಭಿವೃದ್ಧಿಗೆ ಹಾಗೂ ಏಳಿಗೆಗಾಗಿ ತಮ್ಮ ಬದ್ಧತೆಯನ್ನು ಪ್ರತಿಬಿಂಬಿಸುವಂತೆ, ಈ ಬಾರಿ ಹುಟ್ಟುಹಬ್ಬವನ್ನು ಸಾರ್ವಜನಿಕ ಜೀವನಕ್ಕೆ ಅರ್ಪಿಸಿರುವುದೇ ಈ ಸಮಾವೇಶದ ಉದ್ದೇಶವಾಗಿದೆ. ಜನಾಂದೋಲನ ರೂಪಿಸಲು ಸೂಕ್ತ ಆಲೋಚನೆಗಳು, ಸಲಹೆಗಳು ಮತ್ತು ದೃಷ್ಟಿಕೋನಗಳನ್ನೊಳಗೊಂಡ ಈ ಸಮಾವೇಶವು ಪಕ್ಷಾತೀತವಾಗಿದ್ದು, ಜಿಲ್ಲೆಯ ಪ್ರಗತಿಗೆ ಮೌಲ್ಯಯುತ ದಿಕ್ಕು ನೀಡಲಿದೆ.

ಈ ಕುರಿತ ಪೂರ್ವಭಾವಿ ಸಭೆಯು ದಿನಾಂಕ 18 ಜೂನ್ 2025, ಬುಧವಾರ ಬೆಳಿಗ್ಗೆ 11 ಗಂಟೆಗೆ ಕವಿತಾಳ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಈ ಸಭೆಯಲ್ಲಿ ಭಾಗವಹಿಸಿ ತಮಗೆ ಇರುವ ಸಲಹೆ, ಸೂಚನೆಗಳನ್ನು ಹಂಚಿಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ. ಸಮಾವೇಶ ಯಶಸ್ವಿಯಾಗಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಭೆಯನ್ನು ಯಶಸ್ವಿಗೊಳಿಸಲು ತಿಮ್ಮಾರೆಡ್ಡಿ ಗೌಡ ಬೋಗವತಿ (ಅಧ್ಯಕ್ಷರು, ಟಿಎಪಿಎಂಸಿ ಮಾನ್ವಿ R.ಅಮರೇಶ್ ನಾಯಕ್ ಪೋತ್ನಾಳ ಹಾಗೂ ಕೆಎಸ್‌ಎನ್ ಸೇವಾ ಸಮಿತಿ ಮಾನ್ವಿ–ಸಿರವಾರ), ಉಮಾಶಂಕರ್ ಜೆಗರಕಲ್ (ಅಧ್ಯಕ್ಷರು, ಕೆಎಸ್‌ಎನ್ ಅಭಿಮಾನಿ ಬಳಗ ಸಿರವಾರ) ಹಾಗೂ ವೀರೇಶ್ ನಾಯಕ್ ಬೆಟ್ಟದೂರು (ಮಾಜಿ ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷರು ಹಾಗೂ ಅಧ್ಯಕ್ಷರು, ಕೆಎಸ್‌ಎನ್ ಅಭಿಮಾನಿ ಬಳಗ ಮಾನ್ವಿ ಅವರು ಮನವಿ ಮಾಡಿದ್ದಾರೆ…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend