ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರಿವು ಜಾಗೃತಿ ಕಾರ್ಯಕ್ರಮ…!!!

Listen to this article

ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರಿವು ಜಾಗೃತಿ ಕಾರ್ಯಕ್ರಮ

ರಾಯಚೂರು
ಜೀವನದ ಯಾವುದಾದರೂ ಒಂದು ಘಟ್ಟಗಳಲ್ಲಿ ಕೆಟ್ಟ ಘಟನೆಗಳು ನಡೆಯುತ್ತವೆ ಸಹಜ ಆದರೆ ಅತಿರೇಕಕ್ಕೆ ಹೋಗಬಾರದು ಅಂತವುಗಳಿಗೆ ಕಡಿವಾಣ ಹಾಕಬೇಕಾದರೆ ನಮ್ಮಲ್ಲಿ ಸಮಾಧಾನ ಎನ್ನುವುದು ಬಹಳ ಇರಬೇಕಾಗುತ್ತದೆ ಸಮಾಧಾನದಿಂದಿದ್ದರೆ ಎಂತಹ ಕೆಟ್ಟ ಘಟನೆಗಳು ಕೂಡ ನಡೆಯದಂತೆ ಅವುಗಳನ್ನು ನಿಯಂತ್ರಣ ಮಾಡಿಕೊಳ್ಳಬಹುದು ನಿಯಂತ್ರಣ ಮಾಡಿಕೊಳ್ಳದೆ ಹೋದರೆ ಆಗಬಾರದ ಅನಾಹುತಗಳು ನಡೆಯುತ್ತವೆ, ಅಂತಹವುಗಳೆ ಕಾನೂನಿನ ಪ್ರಕಾರ ಶಿಕ್ಷೆಗೆ ಶಿಕ್ಷೆಗೆ ಗುರಿಯಾಗುತ್ತವೆ ಇಂತಹವುಗಳು ಅನೇಕ ಬಾರಿ ದುಶ್ಚಟವಾದ ಕುಡಿತದಿಂದ ಅನೇಕ ತಪ್ಪುಗಳು ನಡೆಯುತ್ತವೆ ಕೆಲವೊಮ್ಮೆ ಯಾರು ಬೇಕು ಅಂತಾ ತಪ್ಪು ಮಾಡೋದಿಲ್ಲ ಸಮಯ ಸಂಧರ್ಭ ಹಾಗೆ ಮಾಡಿಸುತ್ತೆ ಅದರಿಂದ ಕಾರಾಗೃಹ ಸೇರಬೇಕಾಗುತ್ತದೆ ಇಂತಹವುಗಳನ್ನು ತಡೆಯಲು ಮುಖ್ಯವಾಗಿ ನಮ್ಮಲ್ಲಿ ಸಮಾಧಾನ ಎನ್ನುವುದನ್ನು ಬೆಳೆಸಿಕೊಳ್ಳಬೇಕು ಕ್ಷಣದಲ್ಲಾದರೂ ತಾಳ್ಮೆ ಸಮಾಧಾನ ಎನ್ನುವುದನ್ನು ನಮ್ಮಲ್ಲಿ ಮೈಗೂಡಿಸಿಕೊಂಡರೆ ಯಾವುದೇ ಮುಂದೆ ಆಗುವ ಕೆಟ್ಟ ಅನಾಹುತಗಳನ್ನು ತಡೆಗಟ್ಟಬಹುದು ಕಾರಾಗೃಹದಲ್ಲಿರುವ ಎಲ್ಲಾ ಬಂದಿಗಳಿಗೂ ಕಾನೂನಿನ ಅನ್ವಯ ತಮ್ಮದೇ ಆದ ಹಕ್ಕುಗಳಿವೆ ಅವುಗಳನ್ನು ಸದ್ಬಳಿಕೆ ಮಾಡಿಕೊಂಡು ಕಾರಾಗೃಹದಲ್ಲಿ ಮನ ಪರಿವರ್ತನೆ ಮಾಡಿಕೊಂಡು ಹೊರಗಡೆ ಹೋಗಿ ಹೊಸ ಜೀವನ ರೂಪಿಸಿಕೊಳ್ಳಬೇಕೆಂದು ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಯಚೂರು ಜಿಲ್ಲಾ ಕಾರಗೃಹದ ಅಧಿಕ್ಷಕರಾದ ಅನಿತಾ ಹಿರೇಮನೆ ತಿಳಿಸಿದರು.

ಅಮ್ಮನ ಮಡಿಲು ಟ್ರಸ್ಟ್ ವತಿಯಿಂದ ನಿನ್ನೆ ರಾಯಚೂರು ಕಾರಾಗೃಹದಲ್ಲಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಎಸ್ ಸಿ ಎ ಬಿ ಕಾಲೇಜಿನ ಪ್ರಾಧ್ಯಾಪಕರಾದ ವಸುಂದರ ಪಾಟೀಲ್ ಮಾತನಾಡಿ ಮಲ್ಲಿಕಾ ಅವರು ಅಮ್ಮನ ಮಡಿಲು ಎನ್ನುವ ಹೊಸ ಸಂಸ್ಥೆಯನ್ನು ಕಟ್ಟಿದ್ದಾರೆ ಪ್ರಥಮವಾಗಿ ಇಂತಹ ಒಳ್ಳೆಯ ಕಾನೂನು ಅರಿವು ಕಾರ್ಯಕ್ರಮ ಮೂಡಿಸುತ್ತಿದ್ದಾರೆ ಇಂತಹ ಕಾರ್ಯಕ್ರಮಗಳು ಮತ್ತಷ್ಟು ನಡಿಯಲಿ ಇದಕ್ಕೆ ನಾವೆಲ್ಲರೂ ಸಹಕಾರ ನೀಡುತ್ತೇವೆ, ಇಂದು ಕಾರಾಗೃಹದಲ್ಲಿ ಇಂತಹ ಒಳ್ಳೆಯ ಕಾರ್ಯಕ್ರಮ ಮಾಡುತ್ತಿದ್ದು ಇಲ್ಲಿ ಕಾರಾಗೃಹದಲ್ಲಿ ಒಳ್ಳೆಯ ಪರಿಸರವಿದ್ದು, ಜೀವನದಲ್ಲಿ ಯಾವುದೋ ಒಂದು ಕೆಟ್ಟ ಘಟನೆ ನಡೆದು ನೀವು ಇಲ್ಲಿ ಬಂದಿದ್ದು ಇದನ್ನೇ ಮನಸ್ಸಿಗೆ ಹಚ್ಕೊಂಡು ಕೂಗಬಾರದು ಇದನ್ನೇ ನೀವು ಒಂದು ಪಾಠವನ್ನಾಗಿ ಮಾಡಿಕೊಂಡು ಹೊರಗಡೆ ಹೊಸ ಜೀವನವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು. ಅಮ್ಮನ ಮಡಿಲು ಟ್ರಸ್ಟ್ ಅಧ್ಯಕ್ಷರಾದ ಮಲ್ಲಿಕಾ ಪೂಜಾರಿಯವರು ಪ್ರಾಸ್ತಾವಿಕ ನುಡಿ ಮಾತನಾಡಿ ನಮ್ಮ ಸಂಸ್ಥೆಯ ಮೊದಲ ಕಾರ್ಯಕ್ರಮವಾಗಿದ್ದು ಇಂತಹ ಅನೇಕ ಕಾರ್ಯಕ್ರಮಗಳನ್ನು ಮುಂದೆ ನಾವು ಮಾಡುತ್ತೇವೆ ಕಾನೂನು ಅರಿವು ಪ್ರತಿಯೊಬ್ಬ ಮನುಷ್ಯನಿಗೂ ಮುಖ್ಯ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು, ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಹಾಗೂ ವಕೀಲರಾದ ಮಂಜುನಾಥ್ ಅವರು ಮಾತನಾಡಿ ಕರಾಗೃಹದ ಬಂದಿಗಳಿಗೆ ಕಾನೂನಿನ ಬಗ್ಗೆ ಹಲವಾರು ಮಾಹಿತಿಗಳನ್ನು ನೀಡಿದರು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಳಕು ಟ್ರಸ್ಟ್ ಅಧ್ಯಕ್ಷರಾದ ಅಣ್ಣಪ್ಪ ಮೇಟಿಗೌಡ ಮಾತನಾಡಿ ಜೀವನದಲ್ಲಿ ಕೆಲವೊಮ್ಮೆ ನಾವು ಮಾಡದ ತಪ್ಪಿಗೂ ಕೂಡ ಶಿಕ್ಷೆ ಅನುಭವಿಸಬೇಕಾಗುತ್ತದೆ, ಕೆಲವೊಮ್ಮೆ ಕೆಟ್ಟ ಸಮಯದಲ್ಲೂ ನಮ್ಮಿಂದ ತಪ್ಪಾದ ಘಟನೆಗಳಿಗೂ ಶಿಕ್ಷೆ ಅನುಭವಿಸಬೇಕಾಗುತ್ತದೆ ಅದನ್ನೇ ನಾವು ಮನಸ್ಸಿಗೆ ಹಚ್ಚಿಕೊಂಡು ಚಿಂತೆ ಮಾಡುತ್ತಾ ಕುಳಿತುಕೊಳ್ಳಬಾರದು ಮನಸ್ಸನ್ನು ಸದೃಢವಾಗಿಸಿಕೊಂಡು ಹೊರಗಡೆ ಹೋದ ಮೇಲೆ ಅಂತಹ ತಪ್ಪುಗಳು ನಡೆಯದಂತೆ ಮುನ್ನಡಿಯಬೇಕು ದಾರಿಯಲ್ಲಿ ಹೋಗುವವನು ಎಡುವುದೇ ಮತ್ತಾರು ಎಡುವವುರಯ್ಯ ಎನ್ನುವಂತೆ ಮನುಷ್ಯ ಜೀವನದಲ್ಲಿ ಎಡುವವುದು ಸಹಜ ಆದರೆ ಮತ್ತೆ ಮತ್ತೆ ಎಡುವಬಾರದು ಎಚ್ಛೆತ್ತುಕೊಂಡು ನಡೆಯಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಎಲ್‌ಎಲ್‌ಬಿ ವಿದ್ಯಾರ್ಥಿಯಾದ ಮಾಲತಿ ಅವರು ನಿರ್ವಹಿಸಿದರು, ನಂತರ ಒಂದಿಷ್ಟು ಚರ್ಚಾ ಕಾರ್ಯಕ್ರಮ ಕೂಡ ನಡೆಯಿತು ಅದರಲ್ಲಿ ವಕೀಲರು ಹಾಗೂ ಮುಖ್ಯ ಅತಿಥಿಗಳು ಅಧ್ಯಕ್ಷರು ಹಾಗೂ ಕರಾಗೃಹದ ಬಂದಿಗಳ ಪ್ರಶ್ನೆಗಳಿಗೆ ಸೂಕ್ತ ಕಾನೂನು ಅಡಿಯಲ್ಲಿ ಸಿಗುವ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು, ವಂದನಾರ್ಪಣೆಯನ್ನು ಕಾರಾಗೃಹದ ಸಿಬ್ಬಂದಿಯಾದ ಕಲ್ಪನಾ ನಾಯಕ ನಿರ್ವಹಿಸಿದರು,ಕಾರ್ಯಕ್ರಮದಲ್ಲಿ ಕಾನೂನು ಪದವಿ ವಿದ್ಯಾರ್ಥಿಗಳಾದ ಶಿವರಾಜು,ದೇವಿ ಐಟಿಐ ಕಾಲೇಜ್ ಪ್ರಾಧ್ಯಾಪಕರಾದ ನರಸಿಂಹಮೂರ್ತಿ, ಕರಾಗೃಹದ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಸೇರಿದಂತೆ ಕಾರ್ಯಕ್ರಮದ ಎಲ್ಲಾ ಬಂದಿಗಳು ಕೂಡ ಉಪಸ್ಥಿತರಿದ್ದರು…

ವರದಿ. ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend