ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಭೂಮಿ ಪೂಜೆ…!!!

Listen to this article

ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಭೂಮಿ ಪೂಜೆ
ಮಾನವಿ: ತಾಲೂಕಿನ ಉಟಕನೂರು ಗ್ರಾಮದಲ್ಲಿ 2024 25 ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ಮಂಜುರಾದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಪರಮಪೂಜ್ಯ ಮರಿಬಸವ ಲಿಂಗ ಸ್ವಾಮಿಗಳು ಮತ್ತು ಜನಪ್ರಿಯ ಶಾಸಕರ ಅಮೃತ ಹಸ್ತದಿಂದ ಭೂಮಿ ಪೂಜೆ ನೆರವೇರಿಸದರು, ಗ್ರಾಮದ ಆಂಜನೇಯ ಗುಡಿಯಿಂದ ಮಠದವರೆಗೆ 55 ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಾಣ ಹಾಗೂ ಸರ್ಕಾರಿ ಪ್ರೌಢಶಾಲೆಗೆ ಎರಡು ಹೆಚ್ಚುವರಿ ಕೊಠಡಿ ನಿರ್ಮಾಣದ ಕಾರ್ಯಕ್ಕೆ ಚಲನೆ ನೀಡಿದರು. ನಂತರ ಮಾತನಾಡಿದ ಶಾಸಕರು ಜನರ ಸೇವೆಯೇ ಜನಾರ್ದನ ಸೇವೆ ಎಂದು ಹಳ್ಳಿ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ನಮ್ಮ ರಾಜಕೀಯ ಗುರುಗಳಾದ ಶ್ರೀಮಾನ್ಯ ಎನ್ ಎಸ್ ಬೋಸ್ ರಾಜ್ ಸಾಹೇಬರು ಮತ್ತು ಮತದಾರ ಪ್ರಭುಗಳ ಮಾರ್ಗದರ್ಶನದಲ್ಲಿ ಮಾನ್ವಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಚಿಂತನೆಯಲ್ಲಿ ಸೇವೆ ಸಲ್ಲಿಸಲು ಸಿದ್ಧನಿದ್ದೇನೆ ಎಂದು ಮಾತನಾಡಿದರು. ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಮರಿಬಸವ ಲಿಂಗ ತಾತನವರು,ಹಾಗೂ ಉಟಕನೂರು ಮುಖಂಡರಾದ ರಾಮನಗೌಡ ಪೊಲೀಸ್ ಪಾಟೀಲ್, ಮಲ್ಲಯ್ಯ ಎಚ್ ಎಂ ಟಿ, ಶಿವಪುತ್ರಪ್ಪ ಪೊಲೀಸ್ ಪಾಟೀಲ್, ಸಿದ್ದಪ್ಪ ಪೂಜಾರಿ, ಪ್ರಾಣೇಶ್, ಶೇಖರಪ್ಪ ಪೂಜಾರಿ, ವೆಂಕಪ್ಪ ಚಲವಾದಿ, ಬಸವಲಿಂಗಪ್ಪ ಹೆಬ್ಬಾಳ, ಶಿವರಾಜ್, ರಾಮನಗೌಡ ಹೊಸಗೌಡ್ರು, ಶಾಲೆಯ ಮುಖ್ಯ ಗುರುಗಳಾದ ಆನಂದ ಸರ್ ಗ್ರಾಮಸ್ಥರು ಹಾಗೂ ಇನ್ನಿತರರು ಭಾಗಿಯಾಗಿದ್ದರು…

ವರದಿ, ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend