ಮುಕ್ಕುಂದ ಕಾಳಿಕಾದೇವಿ ದೇವಸ್ಥಾನದಲ್ಲಿ 1001ದಿಪೋತ್ಸವ ಕಾರ್ಯಕ್ರಮ
ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ 1001 ದೀಪೋತ್ಸವ ಕಾರ್ಯಕ್ರಮ ಹಾಗೂ ಗೌರಿ ಪೂಜೆ ಮಾಡಿ ಮಹಿಳೆಯರು ಆರತಿ ಬೆಳಗುವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಶ್ರೀ ಕಾಳಿಕಾದೇವಿಗೆ ವಿಶೇಷ ಪೂಜೆ,ಅಭಿಷೇಕ ಹಾಗೂ ಪುಷ್ಪಾಲಂಕಾರ ನಡೆಯಿತು.ಸಾಯಂಕಾಲ ಮಹಿಳೆಯರಿಂದ ಗೌರಿ ಪೂಜೆ ಹಾಗೂ ಆರತಿ ಬೆಳಗುವುದು ಹಾಗೂ 1001 ದೀಪಾಲಂಕಾರ ಗೊಳಿಸುವ ಮೂಲಕ ದೀಪೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ನಂತರ ಗ್ರಾಮದ ಸಕಲ ಸದ್ಭಕ್ತರಿಗೆ ಪ್ರಸಾದ ವ್ಯವಸ್ಥೆ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜ ಸದಸ್ಯರು ಹಾಗೂ ದೇವಸ್ಥಾನದ ಅರ್ಚಕರಾದ ಬಸವರಾಜ ಆಚಾರಿ,ಜೀವಣ್ಣ ನಾಗನಕಲ್ಲು,ವೀರೇಶ ಕಾರಟಗಿ,ಶರಣಬಸವ ಆಚಾರಿ,ಶರಣೇಗೌಡ ಸಿರಿಗೇರಿ,ಗೋಪಾಲರಡ್ಡಿ, ಮಲ್ಲೇಶಪ್ಪ ಸಾಹುಕಾರ, ಹೋಟೆಲ್ ಮೂಕಪ್ಪ ಸಾಹುಕಾರ,ಈರಣ್ಣ ಬಡಿಗೇರ ಹಾಗೂ ಮಹಿಳೆಯರು ಊರಿನ ಸಕಲ ಸದ್ಭಕ್ತರು ಭಾಗವಹಿಸಿದ್ದರು…
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030