ಅಕಾಲಿಕ ಮಳೆಯಿಂದ ಹಾನಿಗಿಡಾದ ಭತ್ತದ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಬೇಟಿ ನೀಡಿದ ಸನ್ಮಾನ್ಯ ಶ್ರೀ ಬಸನಗೌಡ ಬಾದರ್ಲಿ…!!!

Listen to this article

ಅಕಾಲಿಕ ಮಳೆಯಿಂದ ಹಾನಿಗಿಡಾದ ಭತ್ತದ ಪ್ರದೇಶಕ್ಕೆ ನಮ್ಮ ನಾಯಕರಾದ ಸನ್ಮಾನ್ಯ ಶ್ರೀ ಬಸನಗೌಡ ಬಾದರ್ಲಿ ಮಾನ್ಯ ಶಾಸಕರು ಕರ್ನಾಟಕ ವಿಧಾನ ಪರಿಷತ್ತು ರವರು ಅಧಿಕಾರಿಗಳೊಂದಿಗೆ ಬೇಟಿ ನೀಡಿ
ಗುರುವಾರ ಸಂಜೆ ಸುರಿದ ಭಾರಿ ಮಳೆಗೆ ಸಿಂಧನೂರು ತಾಲೂಕಿನ ಕೆಲ ಹೋಬಳಿಗಳಲ್ಲಿ ಅಪಾರ ಪ್ರಮಾಣದಲ್ಲಿ ಭತ್ತ ನೆಲಕ್ಕುರುಳಿದ್ದು, ರೈತರು ಆತಂಕ ಪಡುವಂತಾಗಿದೆ.
ಇದನ್ನು ಅರಿತ ಕೂಡಲೇ ಇಂದು ಬೆಳಿಗ್ಗೆ ತಹಶೀಲ್ದಾರರು, ಕೃಷಿ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಆರ್.ಐ ಮತ್ತು ವಿ.ಎ ಗಳೊಂದಿಗೆ ಜಂಟಿ ಸರ್ವೆ ಮಾಡಿಸಲು ಗೊರೇಬಾಳ, ಸಾಲಗುಂದ, ಜಾಲಿಹಾಳ ಹೋಬಳಿಯ ಹಾನಿಗೀಡಾದ ಪ್ರದೇಶಗಳಿಗೆ ಬೇಟಿ ನೀಡಿ ಹಾನಿಗೀಡಾದ ಭತ್ತದ ಗದ್ದೆಗಿಳಿದು ವಿಕ್ಷಿಸಿ, ಖುದ್ದು ಮಾಹಿತಿ ಪಡೆದು ಅಧಿಕಾರಿಗಳೊಂದಿಗೆ ಜಂಟಿ ಸರ್ವೆ ಮಾಡಿಸಲಾಯಿತು.
ಈಗಾಗಲೇ ಸಂಬಂಧಪಟ್ಟ ಸಚಿವರೊಂದಿಗೆ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು, ಈ ಜಂಟಿ ಸರ್ವೆ ವರದಿ ಬಂದ ನಂತರ ಹಾನಿ ಪ್ರಮಾಣ ಆಧರಿಸಿ ಪರಿಹಾರ ನೀಡಲು ನಾನು ಸರ್ಕಾರ ಮಟ್ಟದಲ್ಲಿ ರೈತರ ಪರವಾಗಿ ಒತ್ತಡ ಹಾಕುತ್ತೇನೆ ಎಂದರು.

ಈ ವೇಳೆ ತಹಶೀಲ್ದಾರ ಅರುಣ ದೇಸಾಯಿ, ಸಹಾಯಕ ಕೃಷಿ ಅಧಿಕಾರಿ ನಜೀರ್ ಅಹ್ಮದ್, ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು, ಶಿವಕುಮಾರ ಜವಳಿ, ವೆಂಕಟೇಶ ರಾಗಲಪರ್ವಿ, ಯಂಕನಗೌಡ ಗಿಣಿವಾರ, ಖಾಜಾ ಹುಸೇನ್ ರೌಡಕುಂದ, ವೀರಾಜು ಬೂದಿವಾಳ ಕ್ಯಾಂಪ್, ಮಲ್ಲಿಕಾರ್ಜುನ ಹುಡಾ, ಹೇಮಾರಾಜ ಗೊಬ್ಬರಕಲ್, ಸದ್ದಾಂ ರೌಡಕುಂಡ, ಅಮರೇಶಗೌಡ ಗೋರೆಬಾಳ, ಪ್ರಕಾಶ ಸೋಮಲಪುರ, ಸಂತೋಷ್, ಮಹೇಶ ಹಾಗೂ ರೈತರು ಉಪಸ್ಥಿತರಿದ್ದರು…

ವರದಿ. ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend