ಮಳೆಗೆ ನೆಲಕಚ್ಚಿದ ಭತ್ತ
ಮಾನವಿ: ಮಳೆ ಯಿಂದ ತಾಲೂಕಿನ ಕೆಲವು ರೈತರ ಭತ್ತ ಬೆಳೆಗಳು ನೆಲಕ್ಕೆ ಬಿದ್ದು ನಾಶವಾಗಿವೆ ಇದರಿಂದ ಸಂಕಷ್ಟಕ್ಕೆ ಎದುರಾಗಿದ್ದೆವೆಂದು ತಮ್ಮ ನೋವನ್ನು ಪತ್ರಿಕೆಯೊಂದಿಗೆ ತೋಡಿಕೊಳ್ಳುತ್ತಿದ್ದಾರೆ.
ಚಂಡಮಾರುತ ನೋ ಅಥವಾ ಸೈಕ್ಲೋನ್ ಪರಿಣಾಮವೋ ತಿಳಿಯದು ಆದರೆ ಮಳೆಯಿಂದ ಭತ್ತ ನೆಲ್ಲಕ್ಕುರಳಿ ಖರ್ಚು ಮಾಡಿದ ಹಣ ಕೈ ಸುಟ್ಟು ಕೊಂಡಂತಾಗಿದೆ ಎಂದು ತಮ್ಮ ನೋವು ಯಾರಿಗೆ ಹೇಳೋಣ ಎನ್ನುತ್ತಿದ್ದಾರೆ.
ಗುರುವಾರ ದಂದು ಸುರಿಯುತ್ತಿರುವ ಮಳೆ ಹೊಡೆತದಿಂದ ಭತ್ತದ ಬೆಳೆ ನೆಲಕಚ್ಚಿದ ಹೊಲಗಳಿಗೆ ಈ ಭಾಗದ ರೈತರು ಬಹಳ ಕಷ್ಟ ಪಟ್ಟು ಜಮೀನುಗಳಿಗೆ ಭತ್ತ ಬೆಳೆದಿದ್ದಾರೆ ಆದರೆ ಈಗ ಸುರಿದಿರುವ ಮಳೆಯ ರಭಸಕ್ಕೆ ಭತ್ತದ ಬೆಳೆ ಉರುಳಿ ನೆಲಕ್ಕೆ ಬಿದ್ದಿದೆ. ನೋಡಲು ಚಾಪೆ ಹಾಸಿದಂತೆ ಹಾಸಿದೆ ಇದರಿಂದ ಬಹಳಷ್ಟು ಬೆಳೆ ಹಾನಿಯಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ತಕ್ಷಣ ಬೆಳೆ ಹಾನಿ ಸಮೀಕ್ಷೆ ನಡೆಸಿ, ಪರಿಹಾರಕ್ಕಾಗಿ ಎದುರು ನೋಡುವಂತ ಪರಸ್ಥಿತಿ ಉಂಟಾಗಿದೆ.
ರೈತರಿಗೆ ಭತ್ತದ ಬೆಳೆಯೇ ಜೀವನಾಡಿಯಾಗಿದೆ. ಸರ್ಕ
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭತ್ತದ ಬೆಳೆ ನೆಲ ಕಚ್ಚಿದ್ದು ರೈತರು ತೀವ್ರ ಹಾನಿ ಅನುಭವಿಸುವಂತಾಗಿದೆ. ಈ ಬಾರಿ ಮಳೆ ಸುರಿದ ಪರಿಣಾಮ ತಾಲೂಕಿನಲ್ಲಿ ಭತ್ತ ಬೆಳೆದ ರೈತರು ಉತ್ತಮ ಇಳುವರಿ ಹೊಂದಬಹುದು ಎಂಬ ಆಶಾಭಾವನೆಯಲ್ಲಿದ್ದರು. ಇನ್ನೇನು
ಕೊಯ್ಲಿಗೆ ಬಂದಿದೆ ಅನ್ನುವಷ್ಟರಲ್ಲಿ.
ಸುರಿಯುತ್ತಿರುವ ಮಳೆಗೆ ಭತ್ತದ ಬೆಳೆ ನೆಲಕಚ್ಚಿದೆ. ರೈತರಿಗೆ ಗಾಯದ ಮೇಲೆ
ಬರೆ ಎಳೆದಂತಾಗಿದೆ. ನೀರಾವರಿ ಭಾಗದ
ಇಂತಹ ಪ್ರಕೃತಿ ವಿಕೋಪ ಅತಿವೃಷ್ಟಿ ಸಂದರ್ಭದಲ್ಲಿ ಸಾಲ ಬಾದೆಗೆ ಕಾರಣರಾಗುತ್ತಾರೆ. ಇದಕ್ಕೆ ಸರ್ಕಾರ ರೈತರ ಮನವಿ
ಕೊಡುವವರೆಗೆ ಕಾಯದೆ ಅವರಿಗೆ ಶಾಶ್ವತ ಪರಿಹಾರ ನೀಡಲು ಮುಂದಾಗಬೇಕು.
ಬೆಳೆ ಹಾನಿಯಿಂದ ನಷ್ಟಕ್ಕೀಡಾದ ರೈತರಿಗೆ ಪರಿಹಾರ ನೀಡಬೇಕು .. ರೈತ ಮುಖಂಡ ಶ್ರೀಧರ್ ಗೌಡ ಕರಾಬದಿನ್ನಿ..
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030