ರೈತನ ಕಣ್ಣೀರು
ಭತ್ತದ ಸಮೃದ್ಧ ಬೆಳೆಗಳು ಕೈ ಸೇರುವ ಹೊತ್ತಿಗೆ
ಸುಗ್ಗಿಯ ಹಿಗ್ಗಿನಿಂದ ರಾಶಿಗಳನ್ನ ಮಾಡಬೇಕು ಎನ್ನುವ ಮನಸ್ಸಿಗೆ
ಅಕಾಲಿಕ ಮಳೆರಾಯ ಮಣ್ಣು ಹಾಕಿದ ರೈತರ ಗೇಣು ಹೊಟ್ಟೆಗೆ!
ಮಳೆಯ ಹನಿಗಳ ನಡುವೆ ಬೆವರ ಹನಿಗಳು ಮಾಯವಾದವು!
ತೆನೆಹೊತ್ತು ನಿಂತ ಪೈರು ನೀರುಪಾಲಾದವು ! ಮುಂದೆ ಬದುಕು ಹೇಗೆ ಕಟ್ಟಿಕೊಳ್ಳಬೇಕು ಎಂಬುದು ರೈತರ ಮನಸುಗಳು ಮನದಲ್ಲಿ ಮರುಗುತ್ತಿದ್ದವು !//
ಒಮ್ಮೊಮ್ಮೆ ಸುಮ್ಮನೆ ರೈತರಾಗಬಾರದು ಎನ್ನುವ ಮನಸು,
ಕೃಷಿಯ ಬಿಟ್ಟು ಏನು ಗೊತ್ತಿರದ ಬದುಕು! ಭೂತಾಯಿಯ ಸೇವೆ ಮಾಡಲು ನಿಂತರೆ,
ಪ್ರಕೃತಿ-ವಿಕೋಪದಂತ ಬೆಳೆ ಬರುವ ಸಮಯದಲ್ಲಿ ಮಳೆರಾಯನ ಮುನಿಸು’
ಸರಿದರೆ ಸರಿದು ಬಿಡು ಜೀವನ ಸಾಗಿಸುವೆವು ವರುಣದೇವ ನೀ ಮಾಡು ಮನಸ್ಸು! //
ಆಫೀಸುಗಳಲ್ಲಿ ಕುಳಿತು ಮಾತನಾಡುವ ಕೆಲ ಅಧಿಕಾರಿಗಳಿಗೆ ಏನು ಗೊತ್ತು? ರೈತರಿಗೆ ಬಂದು ಒದಗಿರುವ ವಿಪತ್ತು!
ಹಗಲು -ರಾತ್ರಿ ಎನ್ನದೆ ಶ್ರಮಿಸಿದ ರೈತರ ಜೀವಕ್ಕೆ ಬಂತು ಕುತ್ತು!
ಆದ ನಷ್ಟಗಳನ್ನ ಒಮ್ಮೆ ಪರಿಶೀಲಿಸಿ ಪರಿಹಾರಗಳ ಮೂಲಕ ಕೈ ಹಿಡಿದು ಕಣ್ಣೀರು ಒರೆಸಿದರೆ ರೈತರಿಗೆ ಆದಿತು ಒಂದಿಷ್ಟು ಒಳಿತು,..
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030