ಯುವಕರ ಕಣ್ಮಣಿ ವಿರುಪಾಕ್ಷಿ ಗೌಡರ ಜನುಮದಿನ
ಪೋತ್ನಾಳ ಗ್ರಾಮದ ಯುವ ಕಣ್ಮಣಿ ಯುವ ನಾಯಕ ಶ್ರೀ ವಿರುಪಾಕ್ಷಿ ಗೌಡ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಪೋತ್ನಾಳ್ ಗ್ರಾಮದಲ್ಲಿ ಜರುಗಿತು.ಹೊಗಳಿಕೆಗೆ ಮನ ನೀಡದ ತೆಗಳಿಕೆಗೆ ಕಿವಿಗೊಡದ ನಿಮ್ಮನ್ನ ಏನೆಂದು ಕರೆಯುವುದು
ಆಡಂಬರದ ಜೀವನ ಗೊತ್ತಿರದ ಸರಳ ವ್ಯಕ್ತಿತ್ವದ ದೊರೆ ಬಡವರ ಪಾಲಿನ ದಾರಿದೀಪ, ಹಸಿದು ಬಂದವರ ಪಾಲಿಗೆ ಅನ್ನದಾತ, ನೊಂದು ಬಂದವರ ಪಾಲಿನ ಆಶ್ರಯದಾತ, ಸ್ನೇಹ ಪ್ರೀತಿಯಲಿ ಸಾಹುಕಾರ, ಬಲಗೈಲಿ ಕೊಟ್ಟದ್ದು ಎಡಗೈಗೂ ತಿಳಿಸದ ಸರಳಜೀವಿ ವಿರುಪಾಕ್ಷಿ ಗೌಡರ ಹುಟ್ಟು ಹಬ್ಬದ ಅಂಗವಾಗಿ ತಾಲ್ಲೂಕು ಮಟ್ಟದ ಮಟ್ಟದ ಸಂಗ್ರಾಣಿ ಕಲ್ಲು ಎತ್ತುವ ಕಾರ್ಯಕ್ರಮವನ್ನು ಗೆಳೆಯರ ಬಳಗದಿಂದ ಹಮ್ಮಿಕೊಳ್ಳಲಾಗಿತ್ತು ಗೆಳೆಯರಾದ ಈಶ್ವರ್ ಮುದ್ದನಗುಡ್ಡಿ ಪ್ರಥಮ ಬಹುಮಾನ ,ಮುದುಕಪ್ಪ ಬುಡ್ಡೆಕಲ್ ದ್ವಿತೀಯ ಬಹುಮಾನ, ಶೇರ್ಖಾನ್ ಪೋತ್ನಾಳ ತೃತೀಯ ಬಹುಮಾನ, ನಿಂಗಪ್ಪ(ಹಳ್ಳೆ) ಚತುರ್ಥಿ ಬಹುಮಾನ ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಿದ್ದರು ಮತ್ತು ಪೋತ್ನಾಳ ಭಾಗದ ಸುತ್ತಮುತ್ತಲಿನ ಹಳ್ಳಿಯ ನೂರಾರು ಯುವಕರು ಹಿರಿಯರು ಮತ್ತು ಯುವ ಬಳಗ ಮತ್ತು ಗೆಳೆಯರ ಬಳಗ ಉಪಸ್ಥಿತರಿದ್ದರು..
ಸುತ್ತಮುತ್ತಲಿನ ಗ್ರಾಮದ ಹಿರಿಯರು ಯುವಕರು ಸ್ನೇಹಿತರ ಪೋತ್ನಾಳ ಗ್ರಾಮದ ಎಲ್ಲಾ ಯುವಕರಿಗೆ ಮತ್ತು ಗೆಳೆಯರ ಬಳಗಕ್ಕೆ ನನ್ನ ಹುಟ್ಟು ಹಬ್ಬಕ್ಕೆ ಪ್ರೀತಿಯಿಂದ ಶುಭಕೋರಿದ ಸರ್ವರಿಗೂ ಹೃತೂರ್ವಕ ಧನ್ಯವಾದಗಳು. ಈ ನಿಮ್ಮ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಚಿರಋಣಿ. ನಿಮ್ಮ ಶುಭ ಹಾರೈಕೆಗಳು ನನಗೆ ಮತ್ತಷ್ಟು ಪ್ರೋತ್ಸಾಹ, ಶಕ್ತಿ ತುಂಬಿದಂತಾಗಿದೆ. ನಿಮ್ಮೆಲ್ಲರ ಆಶೀರ್ವಾದ, ಸಹಕಾರ ಮತ್ತು ಬೆಂಬಲವೇ ನನಗೆ ಶ್ರೀರಕ್ಷೆ ಎಂದು ಶ್ರೀ ವಿರುಪಾಕ್ಷಿಗೌಡ ಹೇಳಿದರು..
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030