ಕಾರುಣ್ಯ ಆಶ್ರಮದ ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿ ವೆಂಕಟೇಶ್ ಚವ್ಹಾಣ.
ಸಿಂಧನೂರು ನಗರ ಪೊಲೀಸ್ ಠಾಣೆಯ ಪಿ.ಎಸ್.ಐ. ವೆಂಕಟೇಶ ಚೌವ್ಹಾಣ್ ಅವರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ” ಆಶ್ರಮದ ವತಿಯಿಂದ ಹಮ್ಮಿಕೊಂಡಿದ್ದ ಕಡ್ಡಾಯವಾಗಿ ಹೆಲ್ಮೆಟ್ ಬಳಸಿ ಜೀವ ಉಳಿಸಿಕೊಳ್ಳಿ ” ಎನ್ನುವ ಅಭಿಯಾನವನ್ನು ಉದ್ಘಾಟಿಸಿ ಆಶ್ರಮದಲ್ಲಿನ ವೃದ್ಧರು ಹಾಗೂ ವಯಸ್ಕರ ಬುದ್ಧಿಮಾಂದ್ಯರಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಆಶ್ರಮದ ಎಲ್ಲಾ ಕೋಣೆಗಳನ್ನು ವೀಕ್ಷಿಸಿ ಆಶ್ರಮದ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಮಯದಲ್ಲಿ ಆಶ್ರಮದ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಿ ಮಹಾತ್ಮ ಗಾಂಧಿಯ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು.
ಈ ಸಮಯದಲ್ಲಿ ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯ ಪಿ.ಎಸ್.ಐ. ಗಳಾದ ವೆಂಕಟೇಶ್ ಚೌವ್ಹಾಣ್ ಮಾತನಾಡಿ ಕಾರುಣ್ಯಾಶ್ರಮದ ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿ ಇಂತಹ ಉತ್ತಮ ಸಂಸ್ಥೆ ನಮ್ಮ ಭಾಗದಲ್ಲಿ ಹುಟ್ಟಿಕೊಂಡಿರುವುದು. ಅದೆಷ್ಟೋ ಅನಾಥರಿಗೆ ಹಾಗೂ ವಯಸ್ಕರ ಬುದ್ಧಿಮಾಂದ್ಯರಿಗೆ ಜೀವನ ರೂಪಿಸಿಕೊಟ್ಟಿದೆ. ಈ ಆಶ್ರಮವು ಹೆಲ್ಮೆಟ್ ಧರಿಸಿ ಜೀವ ಉಳಿಸಿಕೊಳ್ಳಿ ಎನ್ನುವ ಅಭಿಯಾನವನ್ನು ಹಮ್ಮಿಕೊಂಡಿರುವುದು ನಮ್ಮ ಸಂಚಾರಿ ಪೊಲೀಸ್ ಠಾಣೆಯ ಕರ್ತವ್ಯಕ್ಕೆ ಶಕ್ತಿ ತುಂಬಿದಂತಾಗಿದೆ.
ಬರೀ ವೃದ್ಧಾಶ್ರಮ ನಡೆಸುವುದಲ್ಲದೆ ಸಮಾಜದ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು. ಆ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚು ಕಟ್ಟಾಗಿ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಾ ಬಂದಿದೆ.
ಸಾರ್ವಜನಿಕರು ಹೆಲ್ಮೆಟ್ ಬಳಸುವುದರಿಂದ ನಿಮ್ಮ ಕುಟುಂಬ ಸುರಕ್ಷಿತವಾಗಿರುತ್ತದೆ. ಕಡ್ಡಾಯವಾಗಿ ಪ್ರತಿಯೊಬ್ಬರೂ ಕೂಡ ಹೆಲ್ಮೆಟ್ ಬಳಸಿ ನಿಮ್ಮ ಜೀವವನ್ನು ಉಳಿಸಿಕೊಳ್ಳಿ ಎನ್ನುವ ವಿನಂತಿಯನ್ನು ನಾವು ಕಾರುಣ್ಯದಂತಹ ಪುಣ್ಯಭೂಮಿಯಿಂದ ವಿನಂತಿಸಿಕೊಳ್ಳುತ್ತಿದ್ದೇವೆ. ಈ ಕಾರುಣ್ಯ ಕುಟುಂಬಕ್ಕೆ ನಾನು ಹಾಗೂ ನನ್ನ ಇಲಾಖೆ ಒಬ್ಬ ಸದಸ್ಯರಾಗಿ ಪ್ರಾಮಾಣಿಕವಾದ ಅಂತಹ ಸೇವೆಯನ್ನು ಸಲ್ಲಿಸುತ್ತೇವೆ ಎಂದು ಮಾತನಾಡಿದರು.
ನಂತರ ಆಶ್ರಮದ ಆಡಳಿತಾಧಿಕಾರಿಗಳಾದ ಅವಿನಾಶ ದೇಶಪಾಂಡೆ ಮಾತನಾಡಿ ನಮ್ಮೆಲ್ಲರ ಒಳಿತಿಗಾಗಿ ರಕ್ಷಣೆಗಾಗಿ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಕರ್ತವ್ಯ ಮೀರಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಅವರಿಗೆ ಆಶ್ರಮದ ವತಿಯಿಂದ ಗೌರವಿಸಿದ್ದೇವೆ. ನಾಗರಿಕರೆಲ್ಲರೂ ಇವರ ಸಂದೇಶಗಳನ್ನು ಆತ್ಮೀಯತೆಯಿಂದ ಸ್ವೀಕರಿಸಿ ಸಹಕರಿಸಿ ಎಂದು ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳಾದ ದ್ಯಾಮಪ್ಪ. ಕರಿಯಪ್ಪ ಹಾಗೂ ಎನ್. ಜಗನ್ನಾಥ ರಾವ್ ನಿವೃತ್ತ ಶಿಕ್ಷಕರು ರಾಯಚೂರು. ಪರಶುರಾಮ ನಿವೃತ್ತ ಶಿಕ್ಷಕರು ಸಿಂಧನೂರು.ಆಶ್ರಮದ ಸಿಬ್ಬಂದಿಗಳಾದ ಅಶೋಕ ನಲ್ಲ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್. ಶ್ರೀ ಮಠ ಸೇವಾ ಟ್ರಸ್ಟ್ ಕಾರ್ಯಕಾರಿ ಮಂಡಳಿಯ ಪ್ರಮುಖ ಡಾ. ಚನ್ನಬಸವ ಸ್ವಾಮಿ ಹಿರೇಮಠ. ಸುಜಾತ ಹಿರೇಮಠ. ಸಿದ್ದಯ್ಯ ಸ್ವಾಮಿ.ಶರಣಮ್ಮ. ಮರಿಯಪ್ಪ. ಅನೇಕರು ಉಪಸ್ಥಿತರಿದ್ದರು….
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030