ಡಾ ನವೀನ್ ಡೆಂಟಲ್ ಕೇರ್ ಆಸ್ಪತ್ರೆಯಲ್ಲಿ ಅರಣ್ಯ ಇಲಾಖೆ ಹಾಗೂ ಸಂಚಾರಿ ಪೋಲೀಸ್ ಠಾಣೆ ಸಿಬ್ಬಂದಿಗಳಿಗೆ ಉಚಿತ ದಂತ ಚಿಕಿತ್ಸೆ ಹಾಗೂ ತಪಾಸಣೆ ಶಿಬಿರ…!!!

Listen to this article

ಡಾ ನವೀನ್ ಡೆಂಟಲ್ ಕೇರ್ ಆಸ್ಪತ್ರೆಯಲ್ಲಿ ಅರಣ್ಯ ಇಲಾಖೆ ಹಾಗೂ ಸಂಚಾರಿ ಪೋಲೀಸ್ ಠಾಣೆ ಸಿಬ್ಬಂದಿಗಳಿಗೆ ಉಚಿತ ದಂತ ಚಿಕಿತ್ಸೆ ಹಾಗೂ ತಪಾಸಣೆ ಶಿಬಿರ

ಸಿಂಧನೂರು ನಗರದ ಬಸವ ವೃತ್ತದ ಬಳಿಯಿರುವ ಡಾ ನವೀನ್ ಡೆಂಟಲ್ ಕೇರ್ ಆಸ್ಪತ್ರೆಯಲ್ಲಿ ಜೀವ ಸ್ಪಂದನ ಚಾರಿಟಬಲ್ ಟ್ರಸ್ಟ್ ಹಾಗೂ ವನಸಿರಿ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಸಿಂಧನೂರಿನ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಹಾಗೂ ಸಿಂಧನೂರಿನ ಸಂಚಾರಿ ಪೋಲೀಸ್ ಠಾಣೆ ಸಿಬ್ಬಂದಿಗಳಿಗೆ ಉಚಿತವಾಗಿ ದಂತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಹಾಗೂ ಹಣ್ಣಿನ ಸಸಿಗಳ ವಿತರಣೆ ಕಾರ್ಯಕ್ರಮ ನಡೆಯಿತು.

ಈ ಸಮಯದಲ್ಲಿ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕಿ ಉದ್ಘಾಟಿಸಿ ಮಾತನಾಡಿದ ಡಿವೈಎಸ್ಪಿ ಬಿಎಸ್ ತಳವಾರ ಅವರು ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿರುವ ಜೀವ ಸ್ಪಂದನ ಚಾರಿಟಬಲ್ ಟ್ರಸ್ಟ್ ಹಾಗೂ ವನಸಿರಿ ಫೌಂಡೇಶನ್ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಮಾಜಿಕ ಅರಣ್ಯ ವಲಯ ಅಧಿಕಾರಿಗಳಾದ ರುದ್ರಮುನಿ ಕೆ.ವಿ ಮಾತನಾಡಿ,ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸೆ ನೀಡುವ ಸೇವಾ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ,ಅರಣ್ಯ ಇಲಾಖೆ ಸಿಬ್ಬಂದಿಗಳು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ನಂತರ ಶಿಬಿರದಲ್ಲಿ ತಪಾಸಣೆ, ಚಿಕಿತ್ಸೆ ಮಾಡಿಸಿಕೊಂಡ ಸಿಬ್ಬಂದಿಗಳಿಗೆ ಹಣ್ಣಿನ ಗಿಡಗಳನ್ನು ನೆನಪಿನ ಉಡುಗೊರೆಯಾಗಿ ನೀಡಲಾಯಿತು.

ಅತಿಥಿಗಳಾಗಿ ಆಗಮಿಸಿದ ಸಿಂಧನೂರು ಸಂಚಾರಿ ಪೋಲೀಸ್ ಠಾಣೆ ಪಿಎಸ್ಐ ವೆಂಕಟೇಶ್ ಚೌವ್ಹಾಣ್, ಅರುಣಾ ಪ್ರಾದೇಶಿಕ ಅರಣ್ಯ ವಲಯ ಡಿ ಆರ್ ಎಫ್ ಮಾನ್ವಿ, ಮಾತೃ ಆಸರೆ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಲಯ್ಯ ಹಿರೇಮಠ, ವನಸಿರಿ ಫೌಂಡೇಶನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ,ಜೀವ ಸ್ಪಂದನ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ದಂತ ವೈದ್ಯ ಡಾ ನವೀನ್, ಕಾರ್ಯದರ್ಶಿ ಅವಿನಾಶ ದೇಶಪಾಂಡೆ,ಕಾರುಣ್ಯ ನೆಲೆ ವೃದ್ದಾಶ್ರಮ ಮತ್ತು ವಯಸ್ಕರ ಬುದ್ದಿಮಾಂದ್ಯ ಆಶ್ರಮ ಆಡಳಿತಾಧಿಕಾರಿ ಚನ್ನಬಸವ ಸ್ವಾಮಿ ಹಿರೇಮಠ,ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಕಾರ್ಯದರ್ಶಿ ಅಶೋಕ್ ನಲ್ಲ,ನಮ್ಮ ಕರ್ನಾಟಕ ಸೇನೆಯ ತಾಲೂಕಾಧ್ಯಕ್ಷ ಮಂಜುನಾಥ ಗಾಣಿಗೇರ, ವನಸಿರಿ ಫೌಂಡೇಶನ್ ಸದಸ್ಯ ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಬದ್ರಿ ತಿಮ್ಮಾಪೂರ,ಯೂಸುಫ್ ಸಾಬ್ ಬುಡ್ಡಾಣಿ,ಸೇರಿದಂತೆ ಹಲವರಿದ್ದರು…

ವರದಿ. ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend