ಕನ್ನಡ ರಥ ಯಾತ್ರೆಗೆ ತಾಲೂಕ ಆಡಳಿತ ಮತ್ತು ಕರವೇ ವೇದಿಕೆ ಅವರಿಂದ ಅದ್ದೂರಿ ಸ್ವಾಗತ
ನಗರಕ್ಕೆ ಶನಿವಾರದಂದು ಆಗಮಿಸಿದ ಕನ್ನಡ ರಥವು ಮಂಡ್ಯದಲ್ಲಿ ಡಿಸೆಂಬರ್ 20 , 21 ಮತ್ತು 22 ರಂದು ನಡೆಯುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರಕ್ಕೆ ಶನಿವಾರ ಆಗಮಿಸಿದ್ದ ಕನ್ನಡದ ತೇರನ್ನು ಸಂತಸದಿಂದ ಬರಮಾಡಿಕೊಂಡು , ಗಂಗಾವತಿ ನಗರದ ರಸ್ತೆಗಳಲ್ಲಿ ಅದ್ಧೂರಿ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಯಾತ್ರೆಗೆ ತಾಲೂಕಾಡಳಿತ ಹಾಗೂ ಕನ್ನಡಪರ ಸಂಘಟನೆಗಳಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಗರದ ಬಸ್ ನಿಲ್ದಾಣ ಕೃಷ್ಣದೇವ ರಾಯ ಸರ್ಕಲ್ ಹತ್ತಿರ ಧೂರಿಯಾಗಿ ಸ್ವಾಗತ ಕೋರಿ ಮಾಜಿ ಭಜಂತ್ರಿ ಡೊಳ್ಳು ವಾದ್ಯಗಳ ಮೂಲಕ ಮೆರವಣಿಗೆ ನಡೆಸಿ, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಪುಷ್ಪ ನಮನ ಸಲ್ಲಿಸಿ ಪುನ ಕೃಷ್ಣದೇವ ಸರ್ಕಲ್ ಮಾರ್ಗವಾಗಿ ನೀಲಕಂಠೇಶ್ವರ ದೇವಸ್ಥಾನದವರಿಗೆ ಮೆರವಣಿಗೆ ನಡೆಯಿತು. ಬಳಿಕ ಪ್ರಮುಖರು ಕನ್ನಡ ಜ್ಯೋತಿ ರಥಯಾತ್ರೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ, ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ತಹಸೀಲ್ದಾರರಾದ ಯು ನಾಗರಾಜ್ ನಗರಸಭೆ ಅಧಿಕಾರಿಗಳಾದ ಷಣ್ಮುಖಪ್ಪ. ಧೀರ ಕನ್ನಡಿಗ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ವಿರುಪಾಕ್ಷಪ್ಪ ಗೌಡ ಹೇರೂರು. ಜೈ ಕರ್ನಾಟಕ ಜಿಲ್ಲಾಧ್ಯಕ್ಷರಾದ ಬಳ್ಳಾರಿ ರಾಮಣ್ಣ.
ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷರಾದ ಪಂಪಣ್ಣ. ನಗರಸಭೆ ಉಪಾಧ್ಯಕ್ಷರಾದ ಪಾರ್ವತಮ್ಮ ದುರ್ಗೇಶ್ ದೊಡ್ಮನಿ. ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಚೌಡಕಿ. ನಗರಸಭೆ ಜೆ ಇ ನಾಗರಾಜ. ಪ್ರಾಧಿಕಾರದ ಅಧ್ಯಕ್ಷ ಇಲಿಯಾಜ್ ಸೇರಿದಂತೆ ತಾಲೂಕ ಪಂಚಾಯತಿ ವ್ಯವಸ್ಥಾಪಕ ಮಹಾಂತೇಶ ಗೌಡ ವಿವಿಧ ಇಲಾಖೆಯ ಅಧಿಕಾರಿಗಳು ಮಾಜಿ ನಗರಸಭೆ ಸದಸ್ಯ ಶೇಕ್ ನಭಿಸಾಬ್ ಕನ್ನಡ ಅಭಿಮಾನಿಗಳು. ಪಾಲ್ಗೊಂಡಿದ್ದರು…
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030